ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲಾ ಸಮಿತಿಯ ಅರ್ಧ ವಾರ್ಷಿಕ ರಿವೀವ್ ಕಾರ್ಯಕ್ರಮ

Update: 2021-09-22 13:25 GMT

ಬೆಂಗಳೂರು: ಸುನ್ನೀ ಸ್ಟೂಡೆಂಟ್ ಫೆಡರೇಶನ್ (ಎಸ್ಸೆಸ್ಸೆಫ್ ) ಬೆಂಗಳೂರು ಜಿಲ್ಲೆಯ ಅರ್ಧವಾರ್ಷಿಕ ರಿವಿವ್ಯೂ ಕಾರ್ಯಕ್ರಮ ಮರ್ಕಝುಲ್ ಹುದಾ ಮಸ್ಜಿದ್ ಹಲ್ಸೂರ್ ನಲ್ಲಿ ಜಿಲ್ಲಾ ಅಧ್ಯಕ್ಷ ಹಬೀಬ್ ನೂರಾನಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ರಾಜ್ಯ ಸಮಿತಿ ಸದಸ್ಯ ಶಾಫಿ ಸ‌ಅದಿ ಮೆಜೆಸ್ಟಿಕ್ ಉದ್ಘಾಟಿಸಿದರು. 

ಬಳಿಕ ಮಾತನಾಡಿದ ಕಾರ್ಯಕ್ರಮದ ಮುಖ್ಯ ಅತಿಥಿ, ಕೇರಳ ರಾಜ್ಯ SYS  ಪ್ರ.ಕಾರ್ಯದರ್ಶಿ ಹಕೀಂ ಅಝ್ಹರಿ, "ಹೆಸರೇ ಸೂಚಿಸುವಂತೆ ಎಸ್ಸೆಸ್ಸೆಫ್ ನವರು ವಿದ್ಯಾರ್ಥಿಗಳಾಗಬೇಕು. ವಿದ್ಯಾರ್ಜನೆ ಮಾಡುತ್ತಲೇ ಇರಬೇಕು. ಪ್ರತೀ ದಿನ ಸಾಧ್ಯವಿಲ್ಲದವರು ವಾರದ ಅಥವಾ ಮಾಸಿಕ ತರಗತಿಗಳು, ಆನ್ಲೈನ್ ತರಗತಿಗಳ ಮೂಲಕ ಜ್ಞಾನ ಸಂಪಾದನೆ ಮಾಡುತ್ತಲೇ ಇರಬೇಕು ಎಂದು ಸಲಹೆ ನೀಡಿದರು.

ಸಾಂಘಿಕ  ವರದಿಯನ್ನು ಪ್ರ.ಕಾರ್ಯದರ್ಶಿ ಅಖ್ತರ್ ಹಾಗೂ ಪ್ರತೀ ವಿಭಾಗಗಳ ವರದಿಯನ್ನು ಸಮಿತಿ ಕಾರ್ಯದರ್ಶಿ ವಾಚಿಸಿದರು. ಅರ್ಧವಾರ್ಷಿಕ ಲೆಕ್ಕ ಪತ್ರವನ್ನು ಶಬೀಬ್ ಮಂಡಿಸಿದರು. ವೀಕ್ಷಕರಾಗಿ ಆಗಮಿಸಿದ ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಶರೀಪ್ ಕೊಡಗು ರಿವಿವ್ಯೂಗೆ ನೇತೃತ್ವ ನೀಡಿದರು. ಇದೇ ಸಂದರ್ಭದಲ್ಲಿ SYS ಬೆಂಗಳೂರು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಹೊರಬರುವ ಆಂಬುಲೆನ್ಸ್  ಫಂಡ್ ಗೆ ಎರಡು ಲಕ್ಷದ ನಲ್ವವತ್ತು ಸಾವಿರ ರೂ. ನಗದು ಹಸ್ತಾಂತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News