ಭಾರತ್ ಬಂದ್ ಗೆ ಟಿಪ್ಪು ಸಂಘರ್ಷ ಸಮಿತಿಯಿಂದ ಬೆಂಬಲ: ಮುಬಶೀರ್ ಅಹಮದ್

Update: 2021-09-22 14:32 GMT

ಹಾಸನ: ರೈತರ, ಕಾರ್ಮಿಕರ ಹಾಗೂ ಎಪಿಎಂಸಿ ಕರಾಳ ಕಾಯಿದೆ ಜಾರಿ ಮಾಡಲು ಹೊರಟಿರುವ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಸೆ. 27 ರಂದು ವಿವಿಧ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಗೆ ಅಜಾದ್ ಟಿಪ್ಪು ಸಂಘರ್ಷ ಸಮಿತಿಯಿಂದ ಬೆಂಬಲ ಕೊಡುವುದಾಗಿ ಸಮಿತಿ ಅಧ್ಯಕ್ಷರಾದ ಮುಬಶೀರ್ ಅಹಮದ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರದಂದು ಮಾತನಾಡಿ, ಸೆಪ್ಟಂಬರ್ 27 ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ರವರೆಗೆ ಬಂದ್ ಬೆಂಬಲಿಸಿ ಇದರಲ್ಲಿ ಭಾಗಿಯಾಗಲು ಟಿಪ್ಪು ಸಂಘರ್ಷ ಸಮಿತಿ ಹಾಗೂ ಸಹಭಾಗಿ ಸಂಘಟನೆಗಳು ವರ್ತಕ ರಲ್ಲಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ ಎಂದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಜಾರಿ ಮಾಡಿರುವ ಕರಾಳ ಕಾಯ್ದೆ ಶ್ರೀಮಂತರು ಹಾಗೂ ಕಾರ್ಪೊರೇಟ್ ಕಂಪನಿಗಳಿಗೆ ವರದಾನವಾಗಿದೆ. ಇದರಿಂದ ಕಾರ್ಮಿಕರಿಗೆ, ರೈತರಿಗೆ ಬಡಜನರಿಗೆ ಮಾರಕವಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲಾ ಪೆಟ್ರೋಲಿಯಂ ಉತ್ಪನ್ನಗಳು, ಗ್ಯಾಸ್ ಮತ್ತು ಅಗತ್ಯವಸ್ತುಗಳ ಬೆಲೆ ವಿಪರೀತ ಏರಿಕೆ ಕಂಡಿರುವುದರಿಂದ ಕಾಯಿದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಸಂಯುಕ್ತ ಹೋರಾಟ ಕರ್ನಾಟಕ ಕರೆ ನೀಡಿರುವ ಬಂದ್ ಗೆ ಎಲ್ಲರೂ ಸಹಕರಿಸಿ ಯಶಸ್ವಿಗೊಳಿಸುವಂತೆ ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಸಹರಾ ಚಾರಿಟಬಲ್ ಟ್ರಸ್ಟ್ ನ ರಿಯಾಜ್, ಸೈಯದ್ ಅನ್ಸರ್, ಮೊಹಮ್ಮದ್ ಇಪ್ತಯಾರ್, ಯೂಸರ್ ಜಮಾನ್, ಹುಮಾಯಾಸ್ ಪಾಷಾ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News