ಸೇಡಂ: ಕಟ್ಟಿಗೆಯಿಂದ ಹೊಡೆದು ಪತ್ನಿ, ಮಗಳ ಬರ್ಬರ ಹತ್ಯೆ

Update: 2021-09-23 05:57 GMT
ಕೊಲೆಯಾದ ಜಗದೇವಿ ಹಾಗೂ ಅವರ ಮಗಳು ಪ್ರಿಯಾಂಕಾ

ಕಲಬುರಗಿ, ಸೆ.23: ಪತ್ನಿ ಹಾಗೂ ಮಗಳನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಸೇಡಂ ಪಟ್ಟಣದ ವಿಶ್ವನಗರ ಬಡಾವಣೆಯಲ್ಲಿ ಇಂದು ಮುಂಜಾವ 2 ಗಂಟೆ ಸುಮಾರಿಗೆ ನಡೆದಿದೆ.

ಸೇಡಂ ಪಟ್ಟಣದಲ್ಲಿ ಪಾನಿಪುರಿ ವ್ಯಾಪಾರ ಮಾಡಿಕೊಂಡಿದ್ದ ಕಲಬುರಗಿ ನಿವಾಸಿ ದಿಗಂಬರ ಹನುಮಂತಪ್ಪ ಗಾಂಜಲಿ(47) ಕೊಲೆ ಆರೋಪಿ. ಈತ ತನ್ನ ಪತ್ನಿ ಜಗದೇವಿ(35) ಹಾಗೂ ಮಗಳು ಪ್ರಿಯಾಂಕಾ(11) ಕೊಲೆಯಾದವರು. ಇವರಿಬ್ಬರನ್ನೂ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಲಾಗಿದೆ. ಕೆಲ ತಿಂಗಳುಗಳ ಹಿಂದಷ್ಟೇ ಕಲಬುರಗಿಯಿಂದ ಸೇಡಂ ಪಟ್ಟಣದಲ್ಲಿ ಈ ಕುಟುಂಬ ಸಮೆತ ನೆಲೆಸಿತ್ತು.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. ಈ ಬಗ್ಗೆ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News