ಕರ್ನಾಟಕ ಹೈಕೋರ್ಟ್‍ನ 10 ನ್ಯಾಯಮೂರ್ತಿಗಳು ಖಾಯಂ ಆಗಿ ನೇಮಕ

Update: 2021-09-23 15:12 GMT

ಬೆಂಗಳೂರು, ಸೆ.23: ಕರ್ನಾಟಕ ಹೈಕೋರ್ಟ್‍ನಲ್ಲಿ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 10 ಮಂದಿ ನ್ಯಾಯಮೂರ್ತಿಗಳನ್ನು ಕಾಯಂಗೊಳಿಸಿ ಗುರುವಾರ ಸುಪ್ರೀಂಕೋರ್ಟ್ ಕೊಲಿಜಿಯಂ ಅಧಿಸೂಚನೆ ಹೊರಡಿಸಿದೆ.

ನ್ಯಾಯಮೂರ್ತಿ ಮರಲೂರ್ ಇಂದ್ರಕುಮಾರ್ ಅರುಣ್, ಇಂಗಲಗುಪ್ಪೆ ಸೀತಾರಾಮಯ್ಯ  ಇಂದ್ರೇಶ್, ರವಿ ವೆಂಕಪ್ಪ ಹೊಸಮನಿ, ಸವಣೂರು ವಿಶ್ವಜಿತ್ ಶೆಟ್ಟಿ, ಶಿವಶಂಕರ್ ಅಮರಣ್ಣವರ್, ಎಂ.ಗಣೇಶಯ್ಯ ಉಮಾ, ವೇದವ್ಯಾಸಾಚಾರ್ ಶ್ರೀಶಾನಂದ, ಹಂಚಟೆ ಸಂಜೀವ್‍ಕುಮಾರ್, ಪದ್ಮರಾಜ್ ನೇಮಚಂದ್ರ ದೇಸಾಯಿ, ಪಿ.ಕೃಷ್ಣ ಭಟ್ ಅವರನ್ನು ಖಾಯಂ ನ್ಯಾಯಮೂರ್ತಿಗಳಾಗಿ ರಾಜ್ಯ ಹೈಕೋರ್ಟ್‍ಗೆ ನೇಮಕ ಮಾಡಲಾಗಿದೆ. 

ಸದ್ಯದ ಕಾಯಂ ನ್ಯಾಯಮೂರ್ತಿಗಳ ನೇಮಕಾತಿಯೊಂದಿಗೆ ಕರ್ನಾಟಕ ಹೈಕೋರ್ಟ್‍ನಲ್ಲಿ 42 ಕಾಯಂ ನ್ಯಾಯಮೂರ್ತಿಗಳು ಮತ್ತು ಮೂವರು ಹೆಚ್ಚುವರಿ ನ್ಯಾಯಮೂರ್ತಿಗಳು ಇದ್ದಾರೆ. ಒಟ್ಟಾರೆ ಕರ್ನಾಟಕ ಹೈಕೋರ್ಟ್‍ನಲ್ಲಿ 62 ನ್ಯಾಯಮೂರ್ತಿಗಳ ಹುದ್ದೆಗಳಿದ್ದು, ಸದ್ಯ 17 ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿ ಇವೆ.       

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News