ಕ.ಸಾ.ಪ. ಸದಸ್ಯತ್ವ ಅಭಿಯಾನ

Update: 2021-09-23 15:47 GMT

ಬೆಂಗಳೂರು, ಸೆ.23: ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆ. ಕನ್ನಡ ಸಾಹಿತ್ಯ ಪರಿಷತ್ತನ್ನು ನಿಜವಾಗಿಯೂ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಮಹದುದ್ದೇಶದಿಂದ ಇದೇ ನವೆಂಬರ್ 1 ರಿಂದ ಕ.ಸಾ.ಪ. ಸದಸ್ಯತ್ವ ಅಭಿಯಾನ ಆರಂಭಿಸಿದೆ. 

ದೇಶ ವಿದೇಶಗಳಲ್ಲಿ ಇರುವ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಸಂಖ್ಯೆ 3.4 ಲಕ್ಷ. ಇಷ್ಟು ದೊಡ್ಡ ಸಂಖ್ಯೆಯ ಆಜೀವ ಸದಸ್ಯತ್ವ ಹೊಂದಿರುವ ಇನ್ನೊಂದು ಸಂಸ್ಥೆ ಇಲ್ಲ. ಆದರೆ, ಏಳು ಕೋಟಿ ಕನ್ನಡಿಗರಲ್ಲಿ ಇಷ್ಟು ಜನರು ಮಾತ್ರ ಪರಿಷತ್ತಿನ ಸದಸ್ಯರು ಆದರೆ ಸಾಕೇ ಎಂಬ ಪ್ರಶ್ನೆಗೆ ಉತ್ತರವಾಗಿ ನವೆಂಬರ್ 1 ರಿಂದ ಕಸಾಪ ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿದೆ. ಆಸಕ್ತರು ಸದಸ್ಯರಾಗಲು ಇಚ್ಛಿಸುವವರಿಂದ ಅರ್ಜಿ ಆಹ್ವಾನಿಸಲಾಗಿದೆ. 

ಸದಸ್ಯತ್ವ ವಿವರ: 1,000 ರೂಪಾಯಿ (ಕನ್ನಡ ನುಡಿ ಬೇಕಾದರೆ). 500 ರೂಪಾಯಿ (ಕನ್ನಡ ನುಡಿ ಇಲ್ಲದೇ). 18 ವರ್ಷ ಮೇಲ್ಪಟ್ಟ ವಯಸ್ಸಿನ, ಕನ್ನಡ ಓದು ಬರಹ ಬಲ್ಲ ಎಲ್ಲ ವ್ಯಕ್ತಿಗಳು ಸದಸ್ಯರಾಗಬಹುದು. ಅರ್ಜಿ ಜೊತೆ ವಯಸ್ಸು ಮತ್ತು ವಿಳಾಸ ಪುರಾವೆ, 2 ಸ್ಟ್ಯಾಂಪ್ ಸೈಜಿನ ಇತ್ತೀಚಿನ ಭಾವಚಿತ್ರ ಸಲ್ಲಿಸಬೇಕು. ಅರ್ಜಿ www.kasapa.in ಜಾಲತಾಣದಲ್ಲಿ ಲಭ್ಯವಿದೆ. ಹೆಚ್ಚಿನ ವಿವರಗಳಿಗಾಗಿ ದೂ ಸಂಖ್ಯೆ: 080-26612991/26623584 ಸಂಪರ್ಕಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News