ಕಲಬುರಗಿ ಪಾಲಿಕೆಯ ಮೇಯರ್ ಪಟ್ಟಕ್ಕೆ ಕಸರತ್ತು: ಬಿಜೆಪಿ ಸೇರಿದ ಪಕ್ಷೇತರ ಅಭ್ಯರ್ಥಿ

Update: 2021-09-23 16:23 GMT
ಬಿಜೆಪಿ ಸೇರಿದ ಪಕ್ಷೇತರ ಅಭ್ಯರ್ಥಿ

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಯಾವುದೇ ಪಕ್ಷಕ್ಕೆ ಬಹುಮತ ಇಲ್ಲದೇ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಮೇಯರ್ ಸ್ಥಾನಕ್ಕೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಭಾರೀ ಪೈಪೋಟಿ ನಡೆಸಿವೆ. ಈ ಲೋಕಲ್ ರಾಜಕೀಯದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು ಬಿಜೆಪಿ ಸೇರುವ ಮೂಲಕ ಇನ್ನಷ್ಟು ಕುತೂಹಲ ಮೂಡಿಸಿದ್ದಾರೆ.

ಕಲಬುರಗಿ ಪಾಲಿಕೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿರುವ ವಾರ್ಡ್ ನಂ. 36 ಅಭ್ಯರ್ಥಿ ಶಂಭುಲಿಂಗ ಬಳಬಟ್ಟಿ ಅಧಿಕೃತವಾಗಿ ಭಾರತೀಯ ಜನತಾ ಪಕ್ಷ ಸೇರ್ಪಡೆಯಾಗುವ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಶಾಕ್ ನೀಡುವ ಮೂಲಕ ಹೊಸ ತೀರುವು ನೀಡಿದ್ದಾರೆ. 

ಇಂದು  ಬೆಂಗಳೂರಿನಲ್ಲಿ ಬಿಜೆಪಿ ಶಾಸಕರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ಸೇರ್ಪಡೆಗೊಂಡಿದ್ದು. ಈ ಸಂದರ್ಭದಲ್ಲಿ ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್, ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವುರ, ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ರದ್ದೇವಾಡಿ ಅವರುಗಳ ನೇತೃತ್ವದಲ್ಲಿ ಬಿಜೆಪಿ ಸೇರಿದರು.

55 ಸದಸ್ಯ ಬಲ ಹೊಂದಿರುವ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 23 ಸ್ಥಾನ ಪಡೆದಿದ್ದು, ಈಗ ಪಟ್ಟಿಯಲ್ಲಿ ಪಕ್ಷೇತ್ರ ಅಭ್ಯರ್ಥಿ ಸೇರ್ಪೆಗೊಂಡು  ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಕಲಬುರಗಿ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಗೆಲ್ಲಬೇಕಾದರೆ 32 ಮ್ಯಾಜಿಕ್ ನಂಬರ ಆಗಿದ್ದು, ಬಿಜೆಪಿ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಸೇರಿದತೆ ಅದರ ಬಲ 30ಕ್ಕೆ ಏರಿದೆ.

ಇತ್ತ ಕಾಂಗ್ರೆಸ್ 27 ಸದಸ್ಯರು ಹೊಂದಿದ್ದು, ಆ ಪಕ್ಷದ ಶಾಸಕ ಓರ್ವ ರಾಜ್ಯಸಭಾ ಸದಸ್ಯ ಸೇರಿದರೆ ಅದರ ಬಲ 29 ಆಗಲಿದೆ.

ಒಂದಕ್ಕಿಯಲ್ಲಿ ಕೇವಲ 4 ಸ್ಥಾನ ಪಡೆದರೂ ಕೂಡ ಕಿಂಗ್ ಮೇಕರ್ ಸ್ಥಾನದಲ್ಲಿರುವ ಜೆಡಿಎಸ್ ಒಲವಿನ ಮೇಲೆ ಯಾದು ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ಎಂಬುದು ನಿಗೂಢವಾಗಿದೆ.

ಕಲಬುರಗಿ ಸೇರಿದಂತೆ ರಾಜ್ಯದ ಮೂರು ಮಹಾನಗರಪಾಲಿಕೆಗಳಿಗೆ ಚುನಾವಣೆ ನಡೆದು ಎರಡು ವಾರಗಳು ಗತಿಸಿದರೂ ಮೇಯರ್ ಚುನಾವಣೆಯ ಅಧಿಸೂಚನೆ ಹೊರಡಿಸಲಾಗಿಲ್ಲ, ಈ ಬಗ್ಗೆ ಕಲಬುರಗಿ ಪಾಲಿಕೆಯ ಆಯುಕ್ತ ಸ್ನೇಹಲ್ ಲೋಖಂಡೆ ಅವರೊಂದಿಗೆ ಮಾತನಾಡಿದಾಗ ಚುನಾವಣೆ ಅಧಿಸೂಚನೆ ಹೊರಡಿಸಿರಬಹದು ಆದರೆ ಇನ್ನು ಅದು ನಮ್ಮ ಕೈ ಸೇರಿಲ್ಲ, ಕೈ ಸೇರಿದ ಕೂಡಲೇ ದಿನಾಂಕ ಪ್ರಕಟಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News