×
Ad

ವಿಧಾನಸಭೆ ಅಧಿವೆಶನ; 10 ದಿನಗಳಲ್ಲಿ 59 ಗಂಟೆಗಳ ಕಾಲ ಕಾರ್ಯಕಲಾಪ: ಸ್ಪೀಕರ್ ಕಾಗೇರಿ

Update: 2021-09-24 17:22 IST
 ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು, ಸೆ, 24: `ಇದೇ ತಿಂಗಳ 13ರಿಂದ ಆರಂಭವಾದ ವಿಧಾನಸಭೆ ಕಲಾಪ ಒಟ್ಟು 10 ದಿನಗಳ ಕಾಲ ಸುಮಾರು 59 ಗಂಟೆಗಳ ಕಾಲ ಕಾರ್ಯಕಲಾಪ ನಡೆಸಲಾಗಿದೆ' ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ನಿರ್ಣಯವನ್ನು ಮಂಡಿಸಿ ಅಂಗೀಕರಿಸಲಾಗಿದೆ. 2021-22ನೆ ಸಾಲಿನ ಪೂರಕ ಅಂದಾಜುಗಳನ್ನು ಮಂಡಿಸಿ ಅನುಮೋದನೆ ಪಡೆಯಲಾಗಿದೆ. ಧನವಿನಿಯೋಗ ವಿಧೇಯಕ ಸೇರಿದಂತೆ 17 ವಿಧೇಯಕಗಳನ್ನು ಮಂಡಿಸಲಾಗಿದ್ದು, ಅಂಗೀಕರಿಸಲಾಗಿದೆ.

ಈ ಅವಧಿಯಲ್ಲಿ ಸದನವು ಶೇ.90ಕ್ಕಿಂತ ಹೆಚ್ಚಿನ ಕಾರ್ಯಕಲಾಪಗಳನ್ನು ಪೂರ್ಣಗೊಳಿಸಲಾಗಿದೆ. ಸದನ ನಡೆಸಲು ಸಹಕರಿಸಿದ ಸಭಾನಾಯಕ ಮುಖ್ಯಮಂತ್ರಿಯವರಿಗೆ, ಪ್ರತಿಪಕ್ಷ ನಾಯಕರಿಗೆ, ಸಂಪುಟ ಸಚಿವರು ಸೇರಿದಂತೆ ಎಲ್ಲ ಸದಸ್ಯರು ಹಾಗೂ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುವ ಎಂದು ಪ್ರಕಟಿಸಿದ ಸ್ಪೀಕರ್ ಕಾಗೇರಿ, ರಾಷ್ಟ್ರಗೀತೆಯೊಂದಿಗೆ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News