"ಅದು ಕೇವಲ 30 ಸೆಕೆಂಡುಗಳು'': ವೈರಲ್ ವೀಡಿಯೋ ಕುರಿತು ಅಸ್ಸಾಂ ಸಿಎಂ ಆಘಾತಕಾರಿ ಪ್ರತಿಕ್ರಿಯೆ

Update: 2021-09-25 11:06 GMT
ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮ

ಗುವಾಹಟಿ: ಸರಕಾರಿ ಜಮೀನನ್ನು ಒತ್ತುವರಿ ಮಾಡಿದ್ದಾರೆಂದು ಆರೋಪಿಸಿ ಅಸ್ಸಾಂ ಸರಕಾರ ನೂರಾರು ಕುಟುಂಬಗಳನ್ನು ಒಕ್ಕಲೆಬ್ಬಿಸಿದ ನಂತರ ನಡೆದ ಪ್ರತಿಭಟನೆಯ ಸಂದರ್ಭ ಇಬ್ಬರು ಸಾವಿಗೀಡಾಗಿ ಹಲವರು ಗಾಯಗೊಂಡ ಘಟನೆಯ ಬೆನ್ನಲ್ಲೇ ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರ ಹೇಳಿಕೆಯೊಂದು ವಿವಾದಕ್ಕೀಡಾಗಿದೆ.

ಪ್ರತಿಭಟನೆಯ ವೇಳೆ ಪೊಲೀಸ್ ಗುಂಡೇಟಿಗೆ 32 ವರ್ಷದ ಮೊಯಿನುಲ್ ಹಖ್ ಹಾಗೂ 12 ವರ್ಷದ ಶೇಖ್ ಫರೀದ್ ಮೃತಪಟ್ಟಿದ್ದರು. ಆದರೆ ಹಖ್ ಮೇಲೆ ಗುಂಡು ಹಾರಿಸಿದ ಸಂದರ್ಭದ ವೈರಲ್ ವೀಡಿಯೋದಲ್ಲಿ ಸರಕಾರಿ ಏಜನ್ಸಿಗಳು ನೇಮಿಸಿದ್ದ ಛಾಯಾಗ್ರಾಹಕ ಬಿಜೊಯ್ ಬನ್ಯಾ ಎಂಬಾತ ಹಖ್‍ನನ್ನು ತುಳಿಯುತ್ತಿರುವ ದೃಶ್ಯದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ "ಹೌದು ಛಾಯಾಗ್ರಾಹಕನ ವರ್ತನೆಯನ್ನು ಖಂಡಿಸುತ್ತೇನೆ. ಆದರೆ ಇದು ಇಡೀ ಪ್ರಕರಣದ ಕೇವಲ 30 ಸೆಕೆಂಡುಗಳಷ್ಟೇ, ಆದರೆ ಕಳೆದ ನಾಲ್ಕು ತಿಂಗಳುಗಳಿಂದ ಏನು ನಡೆಯುತ್ತಿದೆ?,'' ಎಂದು ಪ್ರಶ್ನಿಸಿದರು.

ಆಘಾತಕಾರಿ ವೀಡಿಯೋದಲ್ಲಿ ಎದೆಗೆ ಗುಂಡೇಟು ತಗಲಿ ನೆಲದಲ್ಲಿ ಬಿದ್ದಿದ್ದ ಹಖ್ ಮೇಲೆ ಕುತ್ತಿಗೆಯಲ್ಲಿ ಕ್ಯಾಮರಾ ತೂಗಾಡಿಸಿದ್ದ ಬಿಜೊಯ್ ತುಳಿಯುತ್ತಿರುವುದು ಭಾರೀ ಆಕ್ರೋಶ ಮೂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News