ಸಂವಿಧಾನ ಜನ ಸಾಮಾನ್ಯನ ಬ್ರಹ್ಮಾಸ್ತ್ರ: ಕೆ.ಆರ್.ರಮೇಶ್ ಕುಮಾರ್

Update: 2021-09-26 13:03 GMT

ಬೆಂಗಳೂರು, ಸೆ. 26: `ಯಾರ ಕಣ್ಣಿಗೂ ಕಾಣದ ಜನಸಾಮಾನ್ಯನಿಗೂ ತಿಳಿಯದಂತೆ ಅವನಿಗೆ ನೀಡಿದಂತಹ ಒಂದು ಬ್ರಹ್ಮಾಸ್ತ್ರವೇ ನಮ್ಮ ಸಂವಿಧಾನ. ಅದನ್ನು ಪರಿಶ್ರಮದಿಂದ ಅಧ್ಯಯನ ಮಾಡಿದರೆ ತಿಳಿಯುತ್ತದೆ' ಎಂದು ವಿಧಾನಸಭೆಯ ಮಾಜಿ ಸ್ವೀಕರ್ ಕೆ.ಆರ್.ರಮೇಶ್ ಕುಮಾರ್ ತಿಳಿಸಿದ್ದಾರೆ.

ರವಿವಾರ ಕರ್ನಾಟಕ ಸಂವಿಧಾನ ಸಂರಕ್ಷಣಾ ಸಮಿತಿಯ ವತಿಯಿಂದ ನಗರದ ಖಾಸಗಿ ಹೋಟೆಲ್ ಎಸ್.ವೈ.ಖುರೇಶಿ ಅವರು ಬರೆದಿರುವಂತಹ `ದಿ ಪಾಪುಲೇಷನ್ ಮಿತ್: ಇಸ್ಲಾಂ, ಫ್ಯಾಮಿಲಿ ಪ್ಲಾನಿಂಗ್ ಅಂಡ್ ಪಾಲಿಟಿಕ್ಸ್ ಇನ್ ಇಂಡಿಯಾ' ಎಂಬ ಆಂಗ್ಲ ಪುಸ್ತಕವನ್ನು ಲೋಕಾರ್ಪಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭಾರತ ಸಂವಿಧಾನವು ಎಲ್ಲರಿಗೂ ಸಮಾನತೆಯನ್ನು ಕಲ್ಪಿಸಿದೆ. ಅದನ್ನು ತಿಳಿದಿಕೊಳ್ಳದೇ ಸಂವಿಧಾನವನ್ನು ಕಡೆಗಣಿಸಿ ಮಾತನಾಡಬಾರದು. ಬದಲಾಗಿ ಎಲ್ಲರೂ ಓದಿ ತಿಳಿದುಕೊಂಡರೆ ಅದು ಅರ್ಥವಾಗುತ್ತದೆ. ಸಂವಿಧಾನವು ಎಲ್ಲ ಪಂಥದವರನ್ನು ಗಮನದಲ್ಲಿರಿಸಿಕೊಂಡು ರೂಪಿತವಾದ ಗ್ರಂಥ. ಇದನ್ನು ತಿಳಿಯದೇ ಮಾತನಾಡುವ ಅವಿವೇಕಿಗಳಿಗೆ ಎಷ್ಟೇ ಹೇಳಿದರೂ ಅರ್ಥವಾಗುವುದಿಲ್ಲ' ಎಂದು ಅವರು ಟೀಕಿಸಿದರು.

ಕಾರ್ಯಕ್ರಮದಲ್ಲಿ ಲೇಖಕ ಎಸ್.ವೈ.ಖುರೇಶಿ ಅವರು ಸೇರಿದಂತೆ ಮಾಜಿ ಕೇಂದ್ರ ಸಚಿವ ಕೆ.ರೆಹ್ಮಾನ್ ಖಾನ್, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್, ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮತ್ತಿತರರು ಉಪಸ್ಥಿತಿಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News