ಪ್ರವಾಸಿ ಮಾರ್ಗದರ್ಶಿಗಳಿಗೆ 18.20 ಲಕ್ಷ ರೂ.ಸಹಾಯಧನ ವಿತರಣೆ: ಸಚಿವ ಆನಂದ್ ಸಿಂಗ್

Update: 2021-09-27 13:41 GMT
ಸಚಿವ ಆನಂದ್ ಸಿಂಗ್ 

ಬೆಂಗಳೂರು, ಸೆ. 27: ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದ ಪ್ರವಾಸೋದ್ಯಮದಲ್ಲಿ ನೋಂದಾಯಿತರಾದ ಪ್ರತಿ ಪ್ರವಾಸಿ ಮಾರ್ಗದರ್ಶಿಗೆ 5 ಸಾವಿರ ರೂ.ಗಳಂತೆ ಒಟ್ಟು 364 ಪ್ರವಾಸಿ ಮಾರ್ಗದಶಿಗಳಿಗೆ 18.20ಲಕ್ಷ ರೂ.ಸಹಾಯಧನ ವಿತರಣೆ ಮಾಡಲಾಗಿದೆ' ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.

ಸೋಮವಾರ `ವಿಶ್ವಪರಿಸರ ದಿನಾಚರಣೆ' ಅಂಗವಾಗಿ ವಿಧಾನಸೌದದ ಮೂರನೇ ಮಹಡಿಯಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, `ಕರ್ನಾಟಕ ಪ್ರವಾಸೋದ್ಯಮ ನೀತಿ 2020-26ರ ಅಡಿಯಲ್ಲಿ ಪೆÇ್ರೀತ್ಸಾಹಧನ, ಸಹಾಯಧನ ಮತ್ತು ರಿಯಾಯಿತಿಗಳಿಗಾಗಿ ಸರಕಾರವು 500 ಕೋಟಿ ರೂ.ಗಳನ್ನು ಕಾಯ್ದಿರಿಸಿದೆ. ಈ ನೀತಿಯನ್ವಯ 2026ರ ವೇಳೆಗೆ 5 ಸಾವಿರ ಕೋಟಿ ರೂ.ಬಂಡವಾಳ ಹೂಡಿಕೆ ಹಾಗೂ ಒಂದು ದಶಲಕ್ಷ ಮಿಲಿಯನ್ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

ಕೋವಿಡ್-19 ಪೂರ್ವಸಿದ್ಧತಾ ಶಿಷ್ಟಾಚಾರಗಳನ್ನು ಬಿಡುಗಡೆ ಮಾಡಿದ ಭಾರತದ ಮೊದಲ ರಾಜ್ಯ ಕರ್ನಾಟಕ ರಾಜ್ಯವಾಗಿದೆ ಎಂಬುದು ಹೆಗ್ಗಳಿಕೆಯ ವಿಷಯವಾಗಿದೆ. ಈ ಸಾಂಕ್ರಾಮಿಕ ರೋಗದಿಂದಾಗಿ ವಿಶ್ವದಾದ್ಯಂತ ಪ್ರವಾಸೋದ್ಯಮವು ನಷ್ಟ ಅನುಭವಿಸಿದ ಕ್ಷೇತ್ರವಾಗಿದ್ದು, ರಾಜ್ಯದ ಮೇಲು ಇದರ ಪರಿಣಾಮ ಬೀರಿದ್ದು, ಕೋವಿಡ್ ಪ್ರಾರಂಭವಾಗಿನಿಂದ ಈವರೆಗೆ ಸುಮಾರು 25 ಸಾವಿರ ಕೋಟಿ ರೂ.ನಷ್ಟ ಅನುಭವಿಸಿದೆ ಎಂದು ಅವರು ವಿವರಿಸಿದರು.

ಶಿಕ್ಷಣ ಕ್ಷೇತ್ರದ ನಂತರ ಹೆಚ್ಚಿನ ಜನರಿಗೆ ಉದ್ಯೋಗ ನೀಡುವ ಪ್ರವಾಸೋದ್ಯಮ ಕ್ಷೇತ್ರದ ಪುನರುಜ್ಜೀವನಕ್ಕಾಗಿ ಸರಕಾರವು ವಿದ್ಯುತ್ ದರ ಮತ್ತು ಆಸ್ತಿ ತೆರಿಗೆಯನ್ನು ಐದು ವರ್ಷಗಳ ಅವಧಿಗೆ ಕೈಗಾರಿಕಾ ದರದಲ್ಲಿ ಸ್ಟಾರ್ ವರ್ಗೀಕೃತ ಹೊಟೇಲ್‍ಗಳು ಪಾವತಿಸುವುದು. 2020-21ರ ಹಣಕಾಸು ವರ್ಷದಲ್ಲಿ ಹೊಟೇಲ್‍ಗಳು, ರೆಸಾರ್ಟ್‍ಗಳು, ರೆಸ್ಟೋರೆಂಟ್‍ಗಳು ಮತ್ತು ಮನೋರಂಜನಾ ಪಾರ್ಕ್‍ಗಳಿಗೆ ಶೇ.50ರಷ್ಟು ಆಸ್ತಿ ತೆರಿಗೆ ಕಡಿತ ಹಾಗೂ ಎಪ್ರಿಲ್-ಜೂನ್ 2021ರ ಅವಧಿಯ ವಿದ್ಯುತ್ ಬಿಲ್ ಡಿಮ್ಯಾಂಡ್ ಶುಲ್ಕ ಮನ್ನಾ, ಅಬಕಾರಿ ಪರವಾನಿಗೆ ಶುಲ್ಕದಲ್ಲಿ ಮನ್ನಾ, ಇದರಲ್ಲಿ ಕೇವಲ ಶೇ.50ರಷ್ಟು ಅಬಕಾರಿ ಪರವಾನಿಗೆ ಶುಲ್ಕ ಮತ್ತು ಹೆಚ್ಚುವರಿ ಪರವಾನಿಗೆ ಶುಲ್ಕವನ್ನು ಹೊಟೇಲ್‍ಗಳು, ರೆಸಾರ್ಟ್‍ಗಳು, ರೆಸ್ಟೋರೆಂಟ್‍ಗಳು ಮತ್ತು ಮನೋರಂಜನಾ ಪಾರ್ಕ್‍ಗಳು ಪಾವತಿಸಬೇಕಾಗುತ್ತದೆ.

ಉಳಿದ ಶುಲ್ಕವನ್ನು 31ನೆ ಡಿಸೆಂಬರ್ 2021ರೊಳಗೆ ಪಾವತಿಸುವಂತೆ ಹಾಗೂ ನೋಂದಾಯಿತ ಪ್ರತಿ ಪ್ರವಾಸಿ ಮಾರ್ಗದರ್ಶಿಗೆ 5 ಸಾವಿರ ರೂ.ಗಳ ಸಹಾಯಧನವನ್ನು ವಿತರಿಸಿ ಪ್ರವಾಸೋದ್ಯಮಕ್ಕೆ ಸರಕಾರ ಹೆಚ್ಚಿನ ಪೆÇ್ರೀತ್ಸಾಹ ನೀಡುತ್ತಿದೆ ಎಂದ ಅವರು, ಪ್ರವಾಸೋದ್ಯಮ ಯೋಜನೆಗಳ ಸ್ಥಾಪನೆ ಮತ್ತು ಕಾರ್ಯಾಚರಣೆಗೆ ಅನುಕೂಲಕರ ವಾತಾವರಣವನ್ನು ಕಲ್ಪಿಸಲು ಪ್ರವಾಸೊದ್ಯಮ ಹೂಡಿಕೆ ಸೌಲಭ್ಯದ ಕೋಶವನ್ನು ಸ್ಥಾಪಿಸಿದ್ದು ಹೂಡಿಕೆ, ಅದರ ಅನುಕೂಲ ಮತ್ತು ಮೇಲ್ವಿಚಾರಣೆಯ್ನು ಸಕ್ರಿಯಗೊಳಿಸಲು ಪ್ರವಾಸೋದ್ಯಮ ಸೌಲಭ್ಯ ಕೋಶವು ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

2024ಕ್ಕೆ ಪ್ರವಾಸೋದ್ಯಮ ಎಕ್ಸ್‍ಪೋ: 2024ರ ಫೆಬ್ರವರಿ 23ರಿಂದ 25ರವರೆಗೆ ಮೂರು ದಿನಗಳ ಕಾಲ ನಗರದ ಅರಮನೆ ಮೈದಾನದಲ್ಲಿ ಪ್ರವಾಸೋದ್ಯ ಎಕ್ಸ್‍ಪೆÇ ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮತಿಸಿದ್ದಾರೆ ಎಂದ ಅವರು, ಪ್ರವಾಸೋದ್ಯಮ ಸೊಸೈಟಿಗೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ವಿಡಿಯೋ ಪ್ರದರ್ಶನ, ಅಂಚೆ ಇಲಾಖೆಯ ಸಹಯೋಗದೊಂದಿಗೆ ವಿಶೇಷ ಅಂಚೆ ಕವರ್ ಹಾಗೂ ಆನ್‍ಲೈನ್ ಪೋರ್ಟಲ್ ಅನ್ನು ಉದ್ಘಾಟಿಸಿದ ಸಚಿವ ಆನಂದ್ ಸಿಂಗ್, ಇದೇ ವೇಳೆ ಸಾಂಕೇತಿಕವಾಗಿ ಇಬ್ಬರು ಪ್ರವಾಸಿ ಮಾರ್ಗದರ್ಶಿಗಳಿಗೆ ಸಹಾಯಧನದ ಚೆಕ್ ವಿತರಿಸಿದರು.

ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಪಂಕಜ ಕುಮಾರ್ ಪಾಂಡೆ,ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕಾಪು ಸಿದ್ದಲಿಂಗಸ್ವಾಮಿ, ಜೆಎಲ್‍ಆರ್‍ನ ಅಧ್ಯಕ್ಷ ಅಪ್ಪಣ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್, ಅಂಚೆ ಇಲಾಖೆಯ ಪೋಸ್ಟ್ ಮಾಸ್ಟರ್ ಗಳಾದ ಮೂರ್ತಿ, ರಾಧಾಕೃಷ್ಣ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಸಿಂಧು ಬಿ.ರೂಪೇಶ್ ಹಾಗೂ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.ಪ್ರವಾಸಿ ಮಾರ್ಗದರ್ಶಿಗಳಿಗೆ 18.20 ಲಕ್ಷ ರೂ.ಸಹಾಯಧನ ವಿತರಣೆ: ಸಚಿವ ಆನಂದ್ ಸಿಂಗ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News