ಪರಮಾಣು ಸ್ಥಾವರಗಳ ಪರಿವೀಕ್ಷಣೆ: ಇರಾನ್- ಐಎಇಎ ಮಧ್ಯೆ ಭಿನ್ನಾಭಿಪ್ರಾಯ

Update: 2021-09-27 16:30 GMT

‌ಟೆಹ್ರಾನ್, ಸೆ.27: ಇರಾನ್ನ ಪರಮಾಣು ಸ್ಥಾವರಗಳ ಕಾರ್ಯನಿರ್ವಹಣೆಯನ್ನು ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ(ಐಎಇಎ) ಪರಿವೀಕ್ಷಿಸುವ ವಿಷಯದಲ್ಲಿ ಮತ್ತೆ ಭಿನ್ನಾಭಿಪ್ರಾಯ ಮೂಡಿದೆ ಎಂದು ವರದಿಯಾಗಿದೆ.

ಟೆಹ್ರಾನ್ ಬಳಿಯ ಕರಾಜ್ ಎಂಬಲ್ಲಿರುವ ಸೆಂಟ್ರಿಫ್ಯೂಜ್(ಅಪಕೇಂದ್ರಕ) ಉತ್ಪಾದಿಸುವ ಘಟಕಕ್ಕೆ ತನ್ನ ಪರಿವೀಕ್ಷಕರು ಭೇಟಿ ನೀಡಲು ಅವಕಾಶ ನಿರಾಕರಿಸಲಾಗಿದೆ ಎಂದು ಐಎಇಎ ರವಿವಾರ ಹೇಳಿದೆ. ಈ ಕ್ರಮವು ಸೆಪ್ಟಂಬರ್ 12ರಂದು ಇರಾನ್ನ ಪರಮಾಣು ಯೋಜನೆ ಮುಖ್ಯಸ್ಥ ಮುಹಮ್ಮದ್ ಇಸ್ಲಾಮಿ ಮತ್ತು ಐಎಇಎ ನಿರ್ದೇಶಕ ರಫೇಲ್ ಗ್ರಾಸಿ ಉಪಸ್ಥಿತಿಯಲ್ಲಿ ಏರ್ಪಟ್ಟ ಒಪ್ಪಂದಕ್ಕೆ ವಿರುದ್ಧವಾಗಿದೆ ಎಂದು ಐಎಇಎ ಹೇಳಿದೆ. ಹಲವು ಹೆಸರಿಸಲಾದ ಪರಮಾಣು ಸ್ಥಾವರಗಳಿಗೆ ಐಎಇಎ ಅಧಿಕಾರಿಗಳಿಗೆ ಪ್ರವೇಶಾವಕಾಶ, ಆ ಸ್ಥಾವರಗಳಲ್ಲಿರುವ ಸಿಸಿ ಕ್ಯಾಮೆರಾಗಳಲ್ಲಿ ಐಇಇಎಯ ಮೆಮೊರಿ ಕಾರ್ಡ್ ಸ್ಥಾಪನೆ ಸಹಿತ ಹಲವು ಒಪ್ಪಂದಗಳನ್ನು ಈಭೇಟಿ ಸಂದರ್ಭ ಮಾಡಿಕೊಳ್ಳಲಾಗಿದೆ.

ಕರಾಜ್ ಸ್ಥಾವರವನ್ನು ಹೊರತುಪಡಿಸಿ, ಇತರೆಲ್ಲಾ ಅಣುಸ್ಥಾವರಗಳಿಗೆ ಪ್ರವೇಶಾವಕಾಶ ನೀಡಲಾಗಿದೆ ಎಂದೂ ಐಎಇಎ ಸ್ಪಷ್ಟಪಡಿಸಿದೆ. ತನ್ನ ಅಣುಸ್ಥಾವರಗಳನ್ನು ಅಂತರಾಷ್ಟ್ರೀಯ ಪರಿವೀಕ್ಷಣೆಗೆ ಮುಕ್ತಗೊಳಿಸಲು 2019ರಲ್ಲಿ ಇರಾನ್ ನಿರಾಕರಿಸಿತ್ತು. ಆದರೆ ಬಳಿಕ ನಿಲುವು ಬದಲಾಯಿಸಿದ ಇರಾನ್, ಅಂತರಾಷ್ಟ್ರೀಯ ಅಣುಶಕ್ತಿ ಸಂಸ್ಥೆ(ಐಎಇಎ) ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಲು ಅನುಮತಿ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News