ಕನಾ೯ಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸ್ವೀಕರಿಸಿದ ಪ್ರೊ.ಸುಮಿತ್ರಾಬಾಯಿ

Update: 2021-09-27 16:55 GMT

ಮೈಸೂರು: ಮಹಿಳೆಯರು ಸವಾಲುಗಳನ್ನು ಎದುರಿಸಿ ಮುಂದೆ ಬರಬೇಕು ಎಂದು ಲೇಖಕಿ ಪ್ರೊ.ಕೆ.ಸುಮಿತ್ರಾಬಾಯಿ ಸಲಹೆ ನೀಡಿದರು.

ನಗರದ ನವಿಲು ರಸ್ತೆಯ ಅವರ ಮನೆಯಲ್ಲಿ ಕನಾ೯ಟಕ ಸಾಹಿತ್ಯ ಅಕಾಡೆಮಿ ನೀಡಿದ 2018ನೇ ಸಾಲಿನ ಲೇಖಕರ ಮೊದಲ ಸ್ವತಂತ್ರ ಕೃತಿ ವಿಭಾಗದಲ್ಲಿ ಅತ್ಯುತ್ತಮ ಕೃತಿಯೆಂದು ಅವರ 'ಸೂಲಾಡಿ ಬಂದೋ ತಿರು ತಿರುಗೀ' ಪುಸ್ತಕ ಬಹುಮಾನ ಪ್ರಶಸ್ತಿ ಸ್ವೀಕರಿಸಿ ಸೋಮವಾರ
ಅವರು ಮಾತನಾಡಿದರು.

ಶಿಕ್ಷಣ ಪಡೆಯಲು ಮಹಿಳೆಯರಿಗೆ ಆಸಕ್ತಿ ಇದ್ದರೂ ಮುಂದುವರೆಸಲಾಗುವುದಿಲ್ಲ. ಇದು ಹಿಂದೆ, ಇಂದು, ಮುಂದೆಯೂ ಇರುತ್ತದೆ. ಆದರೆ ಸವಾಲುಗಳನ್ನು ಎದುರಿಸಬೇಕು ಜೊತೆಗೆ ನನ್ನಂತೆ ಕೃತಿಗಳನ್ನು ರಚಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ಪ್ರವಾಸ ಮಾಡಲಾಗದೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹೋಗಲಾಗಿರಲಿಲ್ಲ. ಆದರೆ ಸಾಹಿತ್ಯ ಅಕಾಡೆಮಿ ಮನೆಗೇ ಬಂದು ಪ್ರಶಸ್ತಿ ನೀಡಿದ್ದಕ್ಕೆ ಅತೀವ ಸಂತೋಷವಾಗಿದೆ ಎಂದರು.

ನನ್ನ ಮೊದಲ ಪುಸ್ತಕಕ್ಕೆ ಪ್ರಶಸ್ತಿ ಬರುತ್ತದೆ ಎಂದುಕೊಂಡಿರಲಿಲ್ಲ. ಆದರೆ ಪ್ರಶಸ್ತಿ ಬಂದಿರುವುದಕ್ಕೆ ಸಂತೋಷ ಮತ್ತು ಹೆಮ್ಮೆಯಾಗಿದೆ ಎಂದರು.
ಸುಮಿತ್ರಾಬಾಯಿ ಪತಿ, ಲೇಖಕ ದೇವನೂರ ಮಹಾದೇವ, ಅವರ ಪುತ್ರಿ ಡಾ.ಮಿತಾ, ಅಳಿಯ ಅವಿನಾಶ್, ಕನಾ೯ಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್, ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ, ಸಿಬ್ಬಂದಿ ಹರೀಶ್ ಪ್ರಕಾಶಕ ಅಭಿರುಚಿ ಗಣೇಶ್ ಹಾಜರಿದ್ದರು. 
ಅಕಾಡೆಮಿ ಸದಸ್ಯೆ ವೈ.ಸಿ.ಭಾನುಮತಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News