ರಾಜ್ಯದಲ್ಲಿರುವುದು ಅನೈತಿಕ ಸರಕಾರ: ಎಂ.ಬಿ.ಪಾಟೀಲ್
Update: 2021-09-29 15:41 IST
ವಿಜಯಪುರ, ಸೆ.29: ರಾಜ್ಯ ಬಿಜೆಪಿ ಸರ್ಕಾರ ಪಾಪದ ಸರಕಾರ. ಈ ಸರಕಾರ ಅನೈತಿಕ ಸರಕಾರವಾಗಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಕಿಡಿಕಾರಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಯುಕೆಪಿ ಯೋಜನೆ ಕಾಂಗ್ರೆಸ್‌ನ ಪಾಪದ ಕೂಸು ಎಂದು ಟೀಕಿಸಿದ್ದ ಗೋವಿಂದ ಕಾರಜೋಳಗೆ ತಿರುಗೇಟು ನೀಡಿದ ಎಂ.ಬಿ.ಪಾಟೀಲ್, ಅನೈತಿಕ ಸರ್ಕಾರದಲ್ಲಿ ಸಚಿವ ಗೋವಿಂದ ಕಾರಜೋಳ ಪಾಪದ ಮಂತ್ರಿಯಾಗಿದ್ದಾರೆ. ವಿಧಾನ ಸೌಧದಲ್ಲಿ ಮಾಜಿ ಮುಖ್ಯಮಂತ್ರ ಸಿದ್ದರಾಮಯ್ಯರ ಪಂಚೆ ಜಾರಿದ ವಿಚಾರವನ್ನು ಟ್ರೋಲ್ ಮಾಡ್ತಿರೋದು ಚಿಲ್ಲರೇ ಕೆಲಸ. ಆ ವಿಚಾರದಲ್ಲಿ ಸಿದ್ದರಾಯ್ಯರಿಗೆ ಆಗಿರಬಹುದು, ನಾಳೆ ಯಡಿಯೂರಪ್ಪರಿಗೆ ಆಗಬಹುದು, ನನಗೂ ಆಗಬಹುದು. ಇದನ್ನು ಟ್ರೋಲ್ ಮಾಡುವುದು ಕೀಳುಮಟ್ಟದ ಕೆಲಸ ಟೀಕಿಸಿದರು.