ಸರಕಾರ ರೈತರಿಗೆ ಪರಿಹಾರ ಕೊಡದಿದ್ರೆ 2023ಕ್ಕೆ ನಾನೇ ಪರಿಹಾರ ನೀಡುವೆ: ಹೆಚ್.ಡಿ. ರೇವಣ್ಣ

Update: 2021-10-01 12:20 GMT
 ಹೆಚ್.ಡಿ. ರೇವಣ್ಣ

ಹಾಸನ : ಆಲೂಗೆಡ್ಡೆ ಮತು ಜೋಳ ಬೆಳೆದ ರೈತರಿಗೆ ಸರಕಾರವು ಪರಿಹಾರ ಕೊಡದಿದ್ರೆ 2023ಕ್ಕೆ ಜೆಡಿಎಸ್ ಅಧಿಕಾರಕ್ಕೆ ಬಂದು ನಾನೇ ಪರಿಹಾರ ವಿತರಣೆ ಮಾಡುವುದಾಗಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ನಗರದ ಸಂಸದರ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಾಸನ ಜಿಲ್ಲೆಯಲ್ಲಿ ಈ ಮುಂಚೆ ಹಲವಾರು ವರ್ಷಗಳ ಹಿಂದೆ 1 ಲಕ್ಷದ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲಾಗುತ್ತಿತ್ತು. ಈಗಲೂ ರಾಜ್ಯದಲ್ಲಿ ಹೆಚ್ಚಾಗಿ ಹಾಸನ ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆಯಲಾಗುತ್ತದೆ. ಆದರೆ ಈ ಬಾರಿ ಕೇವಲ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಆಲೂಗಡ್ಡೆ ಬೆಳೆಯುತ್ತಿದ್ದಾರೆ ಎಂದರು.

1 ಎಕರೆ ಆಲೂಗಡ್ಡೆ ಬೆಳೆಯಲು ರೈತರಿಗೆ 52 ಸಾವಿರ ರುಪಾಯಿ ಖರ್ಚಾಗುತ್ತದೆ. ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆಯಲು 137 ಕೋಟಿ ರೂಪಾಯಿಗಳು ಖರ್ಚಾಗುತ್ತದೆ. 190 ಕೋಟಿ ಆದಾಯ ರೈತರಿಗೆ ಬರಬೇಕಾಗಿತ್ತು. ಕೇವಲ 71 ಕೋಟಿ ಮಾತ್ರ ರೈತರಿಗೆ ಬಂದಿದೆ.ಆಲೂಗಡ್ಡೆ ಬೆಳೆದ ರೈತರು 129 ಕೋಟಿ ನಷ್ಟ ಅನುಭವಿಸಿದ್ದಾರೆ ಎಂದು ಬೇಸರವ್ಯಕ್ತಪಡಿಸಿದರು. ಕೇಂದ್ರ ಹಾಗು ರಾಜ್ಯ ಸರ್ಕಾರವು ರೈತರಿಗೆ ಅವರು ಬೆಳೆ ಬೆಳೆಯಲು ಖರ್ಚು ಮಾಡಿದ ಅರ್ಧದಷ್ಟು ಹಣವನ್ನದಾರು ಪರಿಹಾರ ವಿತರಣೆಯನ್ನು ಮಾಡಬೇಕು. ಜಿಲ್ಲಾಧಿಕಾರಿಯವರು ಆಲೂಗಡ್ಡೆ ಬೆಳೆಯುವ ರೈತರಿಗೆ ಪರಿಹಾರ ನೀಡಲು ವಿಶೇಷ ವರದಿ ಸಲ್ಲಿಸಬೇಕು. ಇಲ್ಲವಾದಲ್ಲಿ ಆಲೂಗಡ್ಡೆ ಬೆಳೆದ ರೈತರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಈ ಸರ್ಕಾರ ಪರಿಹಾರ ಕೊಡದೆ ಹೋದರೆ ನಾನು 2023 ರಲ್ಲಿ ಅಧಿಕಾರಕ್ಕೆ ಬಂದು ಪರಿಹಾರ ವಿತರಣೆ ಮಾಡುತ್ತೆನೆ ಎಂದು ಹೇಳಿದರು.

ಈ ಹಿಂದೆ ನಮ್ಮ ಸರ್ಕಾರ ಬಂದಾಗ ಜಿಲ್ಲೆಯ ತೆಂಗು ಬೆಳೆಗಾರರಿಗೆ 200 ಕೋಟಿ ಪರಿಹಾರ ಕೊಡಿಸಿದ್ದೆನೆ .ತೆಂಗು ಬೆಳೆ ಪರಿಹಾರಕ್ಕಾಗಿ ಶಾಸಕರಾದ ಶಿವಲಿಂಗೇಗೌಡ ಪ್ರತಿಭಟನೆ ನಡೆಸಿದರು ಅಂದಿನ ಸರ್ಕಾರ ಗಮನಹರಿಸಿರಲಿಲ್ಲ.

90305 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದ್ದು, 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಕಟಾವು ಮಾಡಿದ್ದು, ಪ್ರತಿ ಹೆಕ್ಟೆರಗ್ 25-30 ಕ್ಚಿಂಟಾಲ್ ಇಳುವರಿ ಬರುತ್ತಿದ್ದು, ಈ ಹಿಂದೆ ಕ್ವಿಂಟಾಲ್ ಗೆ 1800 ರಿಂದ 2000 ರೂಗಳು ಇದ್ದ ಬೆಲೆ ಇಂದು ದಲ್ಲಾಳಿಗಳ ಹಾವಳಿಯಿಂದ 1200 ರೂ ನೀಡಿ ಖರೀದಿ ಮಾಡಿ ಜೋಳ ಖರೀದಿ ಮಾಡುತ್ತಿದ್ದು. ಇದೆ ಜೋಳವನ್ನು ಸಂಗ್ರಹ ಮಾಡಿ ಕೆ.ಎಂ.ಎಫ್ ಗೆ ಮಾರುತ್ತಾರೆ. ಕೆ.ಎಂ.ಎಫ್ ಕೂಡ ರೈತರ ಬಳಿ ಬೆಂಬಲ ನೀಡಿ ಜೋಳ ಖರೀದಿ ಮಾಡಲಿ ಎಂದರು.

ಮುಖ್ಯಮಂತ್ರಿಗಳು ಹಾಗು ಕೃಷಿ ಸಚಿವರು ಈ ಬಗ್ಗೆ ಗಮನಹರಿಸಲಿ.6.77 .000 ಮೆಟ್ರಿಕ್ ಟನ್ ಜೋಳ ಉತ್ಪಾದನೆ ಆಗಲಿದ್ದು. ಸರ್ಕಾರ ಜೋಳ ಬೆಳೆದ ರೈತರಿಗೆ ಕನಿಷ್ಠ 2 ಸಾವಿರ ರುಪಾಯಿ ಯಾದರು ಕೊಟ್ಟು ಜೋಳ ಖರೀದಿ ಮಾಡಲಿ.ಎಲ್ಲಾ ಜಿಲ್ಲೆಯ ರೈತರಿಗೆ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ ಮಾಡಲು ರಾಜ್ಯ ಹಾಗು ಕೇಂದ್ರ ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು.

ಆಲೂಗಡ್ಡೆ ಬೆಳೆಯಯುತ್ತಿದ್ದ ರೈತರಿಗೆ ಕಳೆದ ಹಲವಾರು ವರ್ಷಗಳಿಂದ ಅಂಗಮಾರಿ ರೋಗ ಕಾಣಿಸಿಕೊಂಡರು ಇಳುವರಿ ಕಡಿಮೆಯಾಗುವ ಕಾರಣ ಗಣನೀಯವಾಗಿ ಆಲೂಗಡ್ಡೆ ಬೆಳೆ ಕಡಿಮೆ ಬಳೆಯುತ್ತಿದ್ದು.ಈ ಬಾರಿಯು ಆಲೂಗಡ್ಡೆ ಬೆಳೆ ಇಳುವರಿ ಹಾಗು ರೈತರಿಗೆ  ಉತ್ತಮ ದರ ದೊರೆಯದ ಕಾರಣ ತೋಟಗಾರಿಕೆ ಇಲಾಖೆ ನಷ್ಟದ ಪರಿಶೀಲನೆ ನಡೆಸಿ ರೈತರಿಗೆ ಪರಿಹಾರ ವಿತರಣೆ ಸಂಬಂಧ ವರದಿ ಸಲ್ಲಿಸಬೇಕಾಗಿರುತ್ತದೆ ಎಂದು ಹೇಳಿದರು.

 ಕಾಂಗ್ರೆಸ್ ಪಕ್ಷದಲ್ಲಿ ಖಾಲಿ ಬಸ್ಸಿನಂತೆ ಕಾಣುತ್ತಿದೆ. ಹಂತ-ಹಂತವಾಗಿ ಒಬ್ಬೊಬ್ಬರೆ ಕಾಂಗ್ರೆಸ್ ಪಕ್ಷದಿಂದ ಹೊರ ಹೋಗುತ್ತಿದ್ದಾರೆ. ಈಗ ತಮ್ಮ ಬಸ್ಸನ್ನು ಭರ್ತಿ ಮಾಡಿಕೊಳ್ಳಲು ಜೆಡಿಎಸ್ ಮತ್ತು ಬಿಜೆಪಿ ಮನೆ ಬಾಗಿಲಿಗೆ ಅಲೆಯುತಿದ್ದಾರೆ ಎಂದು ವ್ಯಂಗ್ಯವಾಡಿದರು.

ಉಪಚುನಾವಣೆಗಾಗಿ ಜೆಡಿಎಸ್ ಪಕ್ಷದ ಮುಖಂಡರನ್ನು ಕಾಂಗ್ರೆಸ್ ಪಕ್ಷ ಖರೀದಿ ಮಾಡುತ್ತಿದ್ದೆ. ಜೆಡಿಎಸ್ ಮುಳುಗುವ ಪಕ್ಷ ಅನ್ನುವರು ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಕರೆದುಕೊಂಡು ಹೋಗುವ ಪರಿಸ್ಥಿತಿ ಬಂದಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕಾಂಗ್ರೆಸ್ ನಾಯಕರು ಪಕ್ಷದಲ್ಲಿ ಈಗ ಇಲ್ಲ. ದೇವರೆ 100 ವರ್ಷದ ಕಾಂಗ್ರೆಸ್ ಪಕ್ಷವನ್ನು ಕೊನೆ ಮಾಡುತ್ತಿದ್ದಾನೆ. ರಾಜಕೀಯ ನಾಯಕರನ್ನು ಹುಟ್ಟು ಹಾಕುವ ಪ್ಯಾಕ್ಟರಿ ಜೆಡಿಎಸ್. ನಂತರ ಮೇವು ಸಿಗುವ ಕಡೆ ಹೊರಡುತ್ತಾರೆ ಎಂದು ಕುಟುಕಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News