ದತ್ತಪೀಠದ ಬಗ್ಗೆ ನ್ಯಾಯಾಲಯದ ಆಶಯದಂತೆ ಸರಕಾರ ಕ್ರಮವಹಿಸಲಿದೆ: ಗೃಹಸಚಿವ ಆರಗ ಜ್ಞಾನೇಂದ್ರ

Update: 2021-10-01 13:53 GMT

ಚಿಕ್ಕಮಗಳೂರು, ಅ.1: ದತ್ತಪೀಠದಲ್ಲಿ ಮುಜಾವರ್ ನೇಮಿಸಿ ಹಿಂದಿನ ಸರಕಾರ ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ತೀರ್ಪಿನ ಪ್ರತಿಯ್ನು ನಾನು ಇನ್ನೂ ಓದಿಲ್ಲ. ಕೋರ್ಟ್ ತೀರ್ಪಿನ ಆಶಯದಂತೆ ಸರಕಾರ ಅಗತ್ಯ ಕ್ರಮಕೈಗೊಳ್ಳಲಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರ್ಟ್ ಆದೇಶದ ಪ್ರತಿ ಬಂದ ಬಳಿಕ ಪರಿಶೀಲನೆ ನಡೆಸಿ ಕಾನೂನು ತಜ್ಞರ ಜೊತೆ ಸಮಾಲೋಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಜೆಡಿಎಸ್ ಮಿಷನ್ 120 ಬಗ್ಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಪಕ್ಷದವರು ಈಗ ತೋಟದ ಮನೆಗೆ ಕರೆದೊಯ್ದು ಸಂಘಟನೆ ಮಾಡಬೇಕು. ಜೆಡಿಎಸ್ ಏನೇ ಮಾಡಿದರೂ ಬಿಜೆಪಿ ನಿತ್ಯನೂತನ. ನಮ್ಮ ಸಂಘಟನೆಯ ಬೂತ್ ಕಮಿಟಿ ಸದಾ ನಡೆಯುತ್ತದೆ. ನಮಗೇನು ಅದು ಆಶ್ಚರ್ಯ ಅನಿಸಲ್ಲ, ಪಕ್ಷ ತತ್ವ ಸಿದ್ಧಾಂತದಡಿಯಲ್ಲಿ ಬೆಳೆದಿದೆ. ಅದು ನಿರಂತರವಾಗಿರುತ್ತದೆ. ಜೆಡಿಎಸ್‍ನ ಮಿಷನ್ 120 ಜೆಡಿಎಸ್ ಗೆ ಅನಿವಾರ್ಯ, ನಮಗಲ್ಲ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News