ಗಾಂಜಾ ಸಾಗಾಟ ; ಓರ್ವನ ಬಂಧನ
Update: 2021-10-02 18:20 IST
ಹನೂರು: ಒಣ ಗಾಂಜಾ ಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಹನೂರು ತಾಲೂಕಿನ ಚಿಕ್ಕಲ್ಲತ್ತೂರು ಗ್ರಾಮದ ಗೋವಿಂದ ಎಂಬಾತನೇ ಬಂಧಿತ ಆರೋಪಿ
ಕೆಂಪಯ್ಯನಹಟ್ಟಿ ಗ್ರಾಮದ ದೇವಸ್ಥಾನದ ಬಳಿ ಗಾಂಜಾ ಸಾಗಣೆ ಮಾಡುತ್ತಿರುವ ಖಚಿತ ಮಾಹಿತಿ ಪಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಅವರ ಮಾರ್ಗದರ್ಶನದಲ್ಲಿ ಕೊಳ್ಳೇಗಾಲ ಉಪವಿಭಾಗದ ಡಿವೈಎಸ್ಪಿ ನಾಗರಾಜು ಠಾಣೆಯ ವೃತ್ತ ನಿರೀಕ್ಷಕ ನಂಜುಂಡಸ್ವಾಮಿ ಸಬ್ ಇನ್ಸ್ ಪೆಕ್ಟರ್ ಮಂಜುನಾಥ್ ಪ್ರಸಾದ್ ರವರ ನೇತೃತ್ವದಲ್ಲಿ ದಾಳಿ ನಡೆಸಿ ಸುಮಾರು 8ಲಕ್ಷ ರೂ. ಮೌಲ್ಯದ 10 ಕೆಜಿ 800 ಗ್ರಾಮಂ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮುಖ್ಯ ಪೇದೆಗಳಾದ ಲಿಂಗರಾಜು ಸೈಯದ್ ಮುಷ್ರಪ್ ಗೋವಿಂದ ನಾಗೇಂದ್ರ ಸುರೇಶ್ ರಂಗಸ್ವಾಮಿ ಮನೋಹರ್ ಶಿವಕುಮಾರ್ ಪ್ರಕಾಶ್ ಚಾಲಕ ನಾಗರಾಜು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು