×
Ad

ಮಡಿಕೇರಿ: ಪ್ರವಾಸಿತಾಣಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ

Update: 2021-10-03 17:52 IST
ರಾಜಾಸೀಟ್ ಉದ್ಯಾನವನ (ಫೈಲ್ ಚಿತ್ರ)

ಮಡಿಕೇರಿ ಅ.3 : ಮಡಿಕೇರಿ ನಗರದ ಪ್ರವಾಸಿತಾಣಗಳಾದ ರಾಜಾಸೀಟ್ ಉದ್ಯಾನವನ, ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯ, ಕೋಟೆ, ಗದ್ದಿಗೆ ಮತ್ತು ನೆಹರು ಮಂಟಪಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ಅ.7 ರಿಂದ 17 ರವರೆಗೆ ಪ್ರವಾಸಿಗರು ಈ ಪ್ರವಾಸಿತಾಣಗಳಿಗೆ ಪ್ರವೇಶ ಮಾಡುವಂತ್ತಿಲ್ಲವೆಂದು ಕೊಡಗು ಜಿಲ್ಲಾಡಳಿತ ತಿಳಿಸಿದೆ. ಜಿಲ್ಲೆಯ ಉಳಿದ ಪ್ರವಾಸಿತಾಣಗಳಲ್ಲಿ ಕೋವಿಡ್ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮನವಿ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News