×
Ad

ಬೆಳಗಾವಿಯ ಅರ್ಬಾಝ್‌ ಕೊಲೆ ಪ್ರಕರಣ: ನ್ಯಾಯಕ್ಕಾಗಿ ಧ್ವನಿಯೆತ್ತಿದ ಸಾಮಾಜಿಕ ತಾಣ ಬಳಕೆದಾರರು

Update: 2021-10-03 21:32 IST

ಬೆಳಗಾವಿ: ಹಿಂದೂ ಯುವತಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದನೆಂಬ ಕಾರಣದಿಂದ ರಾಮಸೇನಾ ಸಂಘಟನೆಗೆ ಸೇರಿದ ದುಷ್ಕರ್ಮಿಗಳಿಂದ ಹತ್ಯೆಗೊಳಗಾಗಿದ್ದಾನೆಂಬ ಆರೋಪಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಅರ್ಬಾಝ್‌ (೨೪) ಪರ ಸಾಮಾಜಿಕ ತಾಣ ಬಳಕೆದಾರರು ಧ್ವನಿಯೆತ್ತಿದ್ದಾರೆ. ಪರಿಣಾಮ ಭಾರತದಾದ್ಯಂತ #JusticeForArbaaz ಟ್ರೆಂಡಿಂಗ್ ಆಗಿದೆ. ವರದಿ ಪ್ರಕಟವಾಗುವ ವೇಳೆ ೨೫,೦೦೦ಕ್ಕೂ ಹೆಚ್ಚು ಹ್ಯಾಶ್‌ ಟ್ಯಾಗ್‌ ಗಳು ಟ್ವೀಟ್‌ ಮಾಡಲಾಗಿತ್ತು.

ಸಾಮಾಜಿಕ ತಾಣ ಬಳಕೆದಾರರು ಪ್ರಕರಣಕ್ಕೆ ಸಂಬಂಧಿಸಿದಂತೆ ಬಲಪಂಥೀಯ ಮನಸ್ಥಿತಿಯನ್ನು ಟೀಕಿಸಿದ್ದು ಮಾತ್ರವಲ್ಲದೇ ತಾಲಿಬಾನಿ ಮನಸ್ಥಿತಿಗೂ, ಈ ಕೃತ್ಯಕ್ಕೂ ಯಾವುದೇ ವ್ಯತ್ಯಾಸವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಿಜೆಪಿ ಸರಕಾರದ ಆಡಳಿತದಲ್ಲಿ ದೇಶದಲ್ಲಿರುವ ಅಲ್ಪಸಂಖ್ಯಾತ ಸಮುದಾಯಗಳ ಕಡೆಗಣಿಸುವಿಕೆ ಹಾಗೂ ಕಿರುಕುಳ ನೀಡುತ್ತಿರುವುದರ ಕುರಿತು ಟ್ವಿಟರಿಗರು ಬೆಟ್ಟು ಮಾಡಿದ್ದಾರೆ.

ರಾಮಸೇನಾ ಕಾರ್ಯಕರ್ತರು ಅರ್ಬಾಝ್‌ ನನ್ನು ಕೊಲೆಗೈದಿರುವುದಾಗಿ ಅವರ ಕುಟುಂಬಸ್ಥರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಅರ್ಬಾಝ್‌ ಶ್ವೇತಾ ಎನ್ನುವ ಯುವತಿಯ ಜೊತೆಗೆ ಪ್ರೇಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಕುಟುಂಬಸ್ಥರು ನೀಡಿದ ದೂರಿನಲ್ಲಿ ಶ್ವೇತಾ ತಂದೆಯನ್ನು ಪ್ರಮುಖ ಆರೋಪಿ ಎಂದು ಉಲ್ಲೇಖಿಸಿದ್ದು, ರಾಮಸೇನೆ ಮುಖಂಡ ಮಹಾರಾಜ್‌ ಹಾಗೂ ಆತನ ಸಹಚರನನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಇದುವರೆಗೂ ಪ್ರಕರಣಕ್ಕೆ ಸಂಬಂಧಿಸಿ ಯಾರನ್ನೂ ಬಂಧಿಸಲಾಗಿಲ್ಲ. ಸಾಮಾಜಿಕ ತಾಣ ಬಳಕೆದಾರರು ಕರ್ನಾಟಕ ಡಿಜಿಪಿಹಾಗೂ ಬೆಳಗಾವಿ ಎಸ್ಪಿ ಖಾತೆಗಳನ್ನು ಟ್ಯಾಗ್‌ ಮಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News