×
Ad

ತಾಯಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ವೆಬ್ ಸಿರೀಸ್ ನೆಟ್‍ಫ್ಲಿಕ್ಸ್ ನಲ್ಲಿ ಪ್ರಸಾರಕ್ಕೆ ಹೈಕೋರ್ಟ್ ತಡೆಯಾಜ್ಞೆ

Update: 2021-10-04 17:23 IST

ಬೆಂಗಳೂರು, ಅ. 4: ಹೆತ್ತ ತಾಯಿಯನ್ನೇ ಕೊಂದು ಸಹೋದರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮಹಿಳಾ ಟೆಕ್ಕಿ ಪ್ರಕರಣದ ಬಗ್ಗೆ ಚಿತ್ರೀಕರಿಸಲಾಗಿರುವ ಸಾಕ್ಷ್ಯಚಿತ್ರವನ್ನು ನೆಟ್‍ಫ್ಲಿಕ್ಸ್ ನಲ್ಲಿ ಪ್ರಸಾರ ಮಾಡದಂತೆ ಹೈಕೋರ್ಟ್ ತಡೆಯಾಜ್ಞೆ ವಿಧಿಸಿದೆ.

ಹೈಕೋರ್ಟ್ ಆದೇಶದ ಮೇರೆಗೆ ನೆಟ್‍ಫ್ಲಿಕ್ಸ್, ತಾಯಿಯನ್ನೇ ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ಟೆಕ್ಕಿ ಅಮೃತ ಪ್ರಕರಣದ ಬಗ್ಗೆ ಚಿತ್ರೀಕರಿಸಲಾಗಿರುವ 'ಎ ಮರ್ಡರ್ಡ್ ಮದರ್' ಎಪಿಸೋಡ್‍ನ್ನು ಬ್ಲಾಕ್ ಮಾಡಿದೆ ಎನ್ನಲಾಗಿದೆ.

ಕೆ.ಆರ್.ಪುರದ ಅಕ್ಷಯನಗರದಲ್ಲಿ ನಡೆದಿದ್ದ ನಿರ್ಮಾಲಾ ಎಂಬುವರ ಹತ್ಯೆ ಪ್ರಕರಣದ ಮತ್ತೊಬ್ಬ ಆರೋಪಿ ಶ್ರೀಧರ್ ರಾವ್ ಸಲ್ಲಿಸಿದ್ದ ಅರ್ಜಿಯ ಮೇಲೆ ನ್ಯಾಯಮೂರ್ತಿ ಬಿ.ಎಂ.ಶ್ಯಾಮಪ್ರಸಾದ್ ಈ ಮಧ್ಯಂತರ ಆದೇಶ ಜಾರಿಗೊಳಿಸಿದ್ದಾರೆ.

ವೆಬ್ ಸೀರಿಸ್‍ನ ಮೊದಲ ಕಂತಿನಲ್ಲಿ ವಿಚಾರಾಣಾಧೀನ ಆರೋಪಿಗಳ ಹೇಳಿಕೆಗಳನ್ನು ಸೇರಿಸಲಾಗಿದೆ. ಹೀಗಾಗಿ, ಅದರ ಪ್ರಸಾರವು ಅವರಿಗೆ ಕಿರುಕುಳ ನೀಡುವುದಲ್ಲದೆ, ಅವರ ಬಗ್ಗೆ ಪೂರ್ವಾಗ್ರಹ ಉಂಟು ಮಾಡುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಈ ಬಗ್ಗೆ ವೆಬ್ ಸರಣಿಯ ನಿರ್ಮಾಪಕರು ಮತ್ತು ನೆಟ್‍ಫ್ಲಿಕ್ಸ್‍ಗೆ ಹೇಳಿಕೆಗಳನ್ನು ಸಲ್ಲಿಸಲು ನ್ಯಾಯಾಲಯ ಅವಕಾಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News