×
Ad

ಚಾಮರಾಜನಗರ: ಕೇಂದ್ರ ಸಚಿವ ಅಜಯ್ ಮಿಶ್ರಾ ವಜಾಕ್ಕೆ ಆಗ್ರಹಿಸಿ ರೈತರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ

Update: 2021-10-04 18:13 IST

ಚಾಮರಾಜನಗರ: ಉತ್ತರ ಪ್ರದೇಶದಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿಸಿದ ಕೇಂದ್ರ ಸಚಿವ ಅಜಯ್  ಮಿಶ್ರ ರವರ ಮಗನ ಕೃತ್ಯಕ್ಕೆ ಕೇಂದ್ರ ಸರ್ಕಾರವು ಕೂಡಲೇ ಅಜಯ್ ಮಿಶ್ರರವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ಮತ್ತು ರೈತರು ಚಾಮರಾಜನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಸೋಮವಾರ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರೈತ ಸಂಘ ಚಾಮರಾಜನಗರದಿಂದ ಟೀ ನರಸೀಪುರದ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ರಸ್ತೆ ತಡೆದು ಸುಮಾರು ಇಪ್ಪತ್ತು ನಿಮಿಷಗಳ ಕಾಲ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಯಿತು .

ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ರೈತರಿಗೆ ಮಾರಕವಾದ ಕಾನೂನುಗಳನ್ನು ಜಾರಿಗೆ ತರಲು ಜಾರಿಗೆ ತರಲು ಹೊರಟ ಮತ್ತು ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಿಸುವಲ್ಲಿ ಹಾಗೂ ಅಚ್ಚೆದಿನ್ ಮಾಡುವಲ್ಲಿ ವಿಫಲವಾಗಿರುವ ಕೇಂದ್ರಸರ್ಕಾರವನ್ನು ಸರಿದಾರಿಗೆ ತರಲು ದೆಹಲಿಯ ಸುತ್ತಮುತ್ತಲು ರೈತರಿಂದ ಹಗಲು-ರಾತ್ರಿ ನಿರಂತರ ಹತ್ತು ತಿಂಗಳು ಚಳುವಳಿ ನಡೆಸಿದ್ದರು ರೈತರ ಪರವಾಗಿ ನಿಲುವು ಪ್ರಕಟಿಸಲು ವಿಫಲವಾಗಿ ಕಾರ್ಪೊರೇಟ್ ಗುಲಾಮಗಿರಿಯಾಗಿ ಬಂಡವಾಳಶಾಹಿಗಳ ಪರ ಕಂಪನಿ ಕಾನೂನುಗಳ ಆಡಳಿತ ಮಾಡಲು ಹೊರಟಿರುವುದನ್ನು ಖಂಡಿಸಿದರು.

ರೈತರು ಸರಕಾರವನ್ನು ಪ್ರಶ್ನಿಸಲು ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ರೈತರ ಬಗ್ಗೆ ಹಗುರವಾಗಿ ಮಾತನಾಡಿ ಕೇವಲ ಹತ್ತು ಹದಿನೈದು ಜನ ರೈತರು ಹೋರಾಟ ಮಾಡುತ್ತಿದ್ದಾರೆ ಇವರ ಹೋರಾಟವನ್ನು ಭಾಜಪ ಕಾರ್ಯಕರ್ತರು ಹತ್ತಿಕ್ಕಬೇಕು ಚಳುವಳಿಯನ್ನು ನಾವು ಗೌರವಿಸಬೇಕೆಂದು ಬಹಿರಂಗ ಹೇಳಿಕೆ ಕೊಟ್ಟ ಸಂದರ್ಭದಲ್ಲಿ ಕೇಂದ್ರ ರಾಜ್ಯ ಖಾತೆ ಸಚಿವರಾದ ಅಜಯ್ ಮಿಶ್ರ ತಣಿ ರವರ ಮಗ ಇರುವರೆಂಬ ಹಾಗೂ ಅವರ ಬೆಂಗಾವಲಿನ ವಾಹನ ರೈತರ ಹೋರಾಟದ ಸ್ಥಳದಲ್ಲಿ ಧರಣಿ ನಿರತರ ಮೇಲೆ ಹತ್ತಿಸಿ ಕೊಲೆ ಮಾಡಿರುವುದು ಕೇಂದ್ರ ಕೊಲೆಗಡುಕತನ ಸರ್ಕಾರವಾಗಿದೆ ಎಂದು ದೂರಿದರು.

ಈ ಪ್ರಕರಣದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಅವರೆಲ್ಲರಿಗೂ ಮರಣದಂಡನೆ ಪ್ರಕಟಿಸಬೇಕು  ಹಾಗೂ ಕೇಂದ್ರ ಸಚಿವ ಅಜಯ್ ಮಿಶ್ರ ರವರನ್ನು ಸಚಿವ  ಸಂಪುಟವನ್ನು ವಜಾ ಮಾಡಬೇಕು ಎಂದು ಆಗ್ರಹಿಸಿ, ಸುಪ್ರೀಂಕೋರ್ಟಿನ ಹಾಲಿ ನ್ಯಾಯಾಧೀಶರಿಂದ ಇದನ್ನು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

 ಪ್ರತಿಭಟನೆಯಲ್ಲಿ ಹಾಲೂರು ಮಹೇಶ್ ಪ್ರಭು ಪಟೇಲ್ ಶಿವಮೂರ್ತಿ ಹೆಬ್ಸೂರು ಬಸವಣ್ಣ ಮೂಡಲ ಪುರ ನಾಗರಾಜು ಹಾಡ್ಯ ರವಿ ಪ್ರಸಾದ್ ಉಡಿಗಾಲ ಮಹದೇವಸ್ವಾಮಿ ಮ್ಯಾಡಿ ಗುರುಪ್ರಸಾದ್ ಮಂಜು ಮೂಕಳ್ಳಿ ಮಹದೇವಸ್ವಾಮಿ ಕಾಡಳ್ಳಿ ಚಿನ್ನಸ್ವಾಮಿ ಮರಿಯಾಲ ಮಹೇಶ್ ಸಿದ್ದರಾಜು ಹಾಜರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News