×
Ad

ಚಾಮರಾಜನಗರ: ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗೆ 5 ವರ್ಷ ಜೈಲು ಶಿಕ್ಷೆ

Update: 2021-10-04 21:38 IST

ಚಾಮರಾಜನಗರ: ದೇಗುಲ ದರ್ಶನಕ್ಕೆಂದು ಅಪ್ರಾಪ್ತೆಯನ್ನು ಆಂಧ್ರಪ್ರದೇಶದ ತಿರುಪತಿಗೆ ಕರೆದೊಯ್ದು ರೈಲಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಯುವಕನಿಗೆ ಚಾಮರಾಜನಗರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಸದಾಶಿವ ಎಸ್ ಸುಲ್ತಾನಪುರಿ 5 ವರ್ಷ ಸಜೆ ವಿಧಿಸಿದ್ದಾರೆ. 

ಚಾಮರಾಜನಗರ ಜಿಲ್ಲೆಯಗುಂಡ್ಲುಪೇಟೆ ಪಟ್ಟಣದ ಕುಮಾರ್ ಅಲಿಯಾಸ್ ಧ್ರುವ(19) ಎಂಬ ಯುವಕ ಶಿಕ್ಷೆಗೊಳಗಾದ ಅಪರಾಧಿ. ಕುಮಾರನು ಕೂಲಿ ಕಾರ್ಮಿಕನಾಗಿದ್ದು, 17 ವರ್ಷದ ಬಾಲಕಿಯನ್ನು ಪುಸಲಾಯಿಸಿ ಪ್ರೀತಿಸುವುದಾಗಿ ಪೀಡಿಸಿ ಕೊನೆಗೆ ದೇಗುಲಕ್ಕೆ ಹೋಗೊಣವೆಂದು 2019 ಫೆ.24 ರಂದು ತಿರುಪತಿಗೆ ಕರೆದೊಯ್ದಿದ್ದ. ದೇವಾಲಯದಿಂದ ಹಿಂತಿರುಗಿ ರೈಲಿನಲ್ಲಿ ಮೈಸೂರಿಗೆ ಬರುವಾಗ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಈ ವೇಳೆ ಲೈಂಗಿಕ ಕ್ರಿಯೆಗೆ ಪೀಡಿಸಿರುವ ಆರೋಪ ಸಾಬೀತಾದ ಹಿನ್ನೆಲೆ ಯುವಕನಿಗೆ 5 ವರ್ಷ ಸಾದಾ ಸಜೆ ಮತ್ತು 75 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತೆ ತಾಯಿ ಗುಂಡ್ಲುಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸರ್ಕಾರದ ಪರವಾಗಿ ವಕೀಲ ಕೆ.ಯೋಗೇಶ್ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News