×
Ad

ಸಹಾಯಕ ಸಬ್‍ ಇನ್‍ಸ್ಪೆಕ್ಟರ್ ಹುದ್ದೆಯಿಂದ ಸಬ್‍ಇನ್‍ಸ್ಪೆಕ್ಟರ್ ಹುದ್ದೆಗೆ ಭಡ್ತಿ; ಸೇವಾವಧಿ ಕಡಿತಕ್ಕೆ ಸಂಪುಟ ಅಸ್ತು

Update: 2021-10-05 19:05 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ. 5: ಪೊಲೀಸ್ ಸಹಾಯಕ ಸಬ್‍ಇನ್‍ಸ್ಪೆಕ್ಟರ್ ಹುದ್ದೆಯಿಂದ ಸಬ್ ಇನ್‍ಸ್ಪೆಕ್ಟರ್ ಹುದ್ದೆಗೆ ಭಡ್ತಿ ನೀಡಲು ಈ ಹಿಂದೆ ಇದ್ದ ಕನಿಷ್ಠ ಸೇವಾವಧಿಯಲ್ಲಿ 5 ವರ್ಷಗಳಿಂದ ನಾಲ್ಕು(4) ವರ್ಷಗಳಿಗೆ ಇಳಿಕೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಮಾಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದು, ಈ ಸಂಬಂಧ ಗೃಹ ಇಲಾಖೆಯಿಂದ ಪ್ರಸ್ತಾಪವನ್ನು ಸಲ್ಲಿಸಿತ್ತು. ಇದರಿಂದ ಪೊಲೀಸ್ ಸಿಬ್ಬಂದಿ ಭಡ್ತಿಗೆ ಅನುಕೂಲವಾಗಲಿದೆ ಎಂದರು. ಗೃಹ ಇಲಾಖೆಯ ಮತ್ತೊಂದು ಪ್ರಸ್ತಾವನೆ ಯಾದ, ಪೊಲೀಸ್ ಸಿಬ್ಬಂದಿಗಳಿಗೆ, 14.5 ಕೋಟಿ ರೂ.ವೆಚ್ಚದಲ್ಲಿ, ಇಲಾಖೆಯ ಸಂಪರ್ಕ ಜಾಲಕ್ಕೆ ಆಧುನಿಕ ಸ್ಪರ್ಶ ನೀಡಿ ಮೇಲ್ದರ್ಜೆಗೇರಿಸುವ ಯೋಜನೆಗೆ ಇಂದಿನ ಸಚಿವ ಸಂಪುಟದ ಸಭೆ ಒಪ್ಪಿಗೆ ನೀಡಿದೆ. 

ಪೊಲೀಸ್ ಇಲಾಖೆಯಲ್ಲಿ ಈಗ ವಿವಿಧ ವೃಂದಗಳಲ್ಲಿ ಮುಂಭಡ್ತಿ ಅವಧಿ 8 ವರ್ಷಗಳಿಗೆ ಇದ್ದು, ಸಿಬ್ಬಂದಿಗಳು ಮುಂಭಡ್ತಿ ಪಡೆಯಲು ವಿಳಂಬವಾಗುತ್ತಿತ್ತು. ಹೀಗಾಗಿ ಅದನ್ನು ತಪ್ಪಿಸಲು ಅವಧಿ ಕಡಿತ ಮಾಡಲಾಗಿದೆ. ಸಂಪುಟ ಸಭೆಯ ಈ ತೀರ್ಮಾನ ಗೃಹ ಇಲಾಖೆ ಸಿಬ್ಬಂದಿಯಿಂದ ಹಿಡಿದು ಎಸ್.ಐ ಹಂತದವರೆಗೂ ಅನ್ವಯಿಸಲಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News