ಬೆಂಗಳೂರು; ಬೀದಿ ನಾಯಿಗೆ ಕಲ್ಲೇಟು: ದೂರು ದಾಖಲು
Update: 2021-10-06 22:31 IST
ಬೆಂಗಳೂರು, ಅ.6: ನಾಯಿ ಮೇಲೆ ಕಲ್ಲಿಂದ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಇಲ್ಲಿನ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಮಲ್ಲೇಶ್ವರಂ ಆರ್.ವಿ. ಎನ್‍ಕ್ಲೇವ್ ಅಪಾರ್ಟ್‍ಮೆಂಟ್‍ನಲ್ಲಿರುವ ಅನುರಾಧಾ ಎಂಬಾಕೆ ಹಲವು ವರ್ಷಗಳಿಂದ ಬೀದಿ ನಾಯಿಗೆ ಆಹಾರ ನೀಡುತ್ತಿದ್ದಾರೆ. ಆದರೆ, ಇದೇ ಸ್ಥಳದಲ್ಲಿ ಮೃದಲಾ ಎಂಬಾಕೆ ಆ ನಾಯಿಯನ್ನು ಕಲ್ಲಿನಿಂದ ಹೊಡೆದು ಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಅನುರಾಧಾ ದೂರು ನೀಡಿದ್ದಾರೆ.
ಬಳಿಕ ಅನುರಾಧಾ ವಿರುದ್ಧ ಸರೋಜಾ ಎಂಬುವವರು ಪ್ರತಿದೂರು ದಾಖಲಿಸಿದ್ದು, ಅನುರಾಧಾ ಮತ್ತು ಈಕೆಯ ಪತಿ ನಾಯಿಗಳಿಗೆ ಆಹಾರ ನೀಡಿ, ಸ್ಥಳೀಯ ಜನರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.