×
Ad

ಕಲ್ಯಾಣರಾವ್ ಮುಚಳಂಬಿ ನಿಧನಕ್ಕೆ ಸಿಎಂ ಬೊಮ್ಮಾಯಿ ಸಂತಾಪ

Update: 2021-10-06 23:34 IST

ಬೆಂಗಳೂರು, ಅ.6: ಬೆಳಗಾವಿಯ ರೈತ ಹೋರಾಟಗಾರ, ಹಸಿರು ಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಸಂಪಾದಕರಾದ ಕಲ್ಯಾಣರಾವ್ ಮುಚಳಂಬಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 

ಹಸಿರು ಕ್ರಾಂತಿ ಉತ್ತರ ಕರ್ನಾಟಕ ಭಾಗದ ಪ್ರಮುಖ ಪತ್ರಿಕೆ. ಈ ಪತ್ರಿಕೆ ರೈತರ ಜೀವನಾಡಿಯಾಗಿತ್ತು. ರೈತರ ಸಮಸ್ಯೆಗಳನ್ನು ಸರಕಾರಕ್ಕೆ ತಲುಪಿಸುವ ಕೆಲಸವನ್ನು ಹಸಿರು ಕ್ರಾಂತಿ ಅಚ್ಚುಕಟ್ಟಾಗಿ ನಿರ್ವಹಿಸಿದೆ. 

ಈ ಪತ್ರಿಕೆಯನ್ನು ಕಟ್ಟಿಬೆಳೆಸಿದ ಕಲ್ಯಾಣರಾವ ಮುಚಳಂಬಿ ಅವರು ಅ.6ರ ಬೆಳಗ್ಗೆ ಸಾವಳಗಿಯಲ್ಲಿ ನಿಧನರಾಗಿರುವುದು ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟ ಎಂದರೆ ತಪ್ಪಾಗಲಾರದು ಎಂದು ಸಿಎಂ ಬಸವರಾಜ ಕಂಬನಿ ಮಿಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News