ಚಾಮರಾಜನಗರ ; ದೇಶದ ಕುಗ್ರಾಮಗಳಿಗೂ ಆರೋಗ್ಯ ಸೇವೆ ದೊರೆಯಬೇಕು: ರಾಷ್ಟ್ರಪತಿ ರಾಮನಾಥ ಕೋವಿಂದ್

Update: 2021-10-07 14:13 GMT

ಚಾಮರಾಜನಗರ : ದೇಶದಲ್ಲಿ ಕುಗ್ರಾಮಗಳಿಗೂ ಆರೋಗ್ಯ ಸೇವೆ ದೊರೆಯುವಂತಾಗಬೇಕು ಎಲ್ಲಾ ಬಡ ಜನಜರಿಗೂ ಉಚಿತ ಚಿಕಿತ್ಸೆ ಸಿಗಬೇಕು ಅದಕ್ಕಾಗಿ ಎಲ್ಲರೂ ಶ್ರಮಿಸೂಣ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ರವರು ಚಾಮರಾಜನಗರದಲ್ಲಿ ಕರೆ ನೀಡಿದರು.

ಚಾಮರಾಜನಗರದಲ್ಲಿ  ವೈದ್ಯಕೀಯ ಶಿಕ್ಷಣ ಸಂಸ್ಥೆಯ 450 ಹಾಸಿಗೆಗಳ ಬೋಧಕ ಆಸ್ಪತ್ರೆ ಲೋಕಾರ್ಪಣೆ ಮಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಆತ್ಮ ನಿರ್ಭರ್  ಭಾರತ್ ಯೋಜನೆಗಳು ರಾಷ್ಟ್ರವನ್ನು ವ್ಯಾಪಿಸಬೇಕು ,ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಸೇವೆ ಎಲ್ಲ ಬಡಜನರಿಗೂ ದೊರೆತ ಅವರ ಬದುಕು ಹಸನಾಗಬೇಕು ಎಂದು ರಾಷ್ಟ್ರಪತಿಯವರು ಆಶಯ ವ್ಯಕ್ತ ಪಡಿಸಿದರು.

ಕನ್ನಡ ದಲ್ಲಿ ಭಾಷಣ ಪ್ರಾರಂಭ ಮಾಡಿದ ರಾಷ್ಟ್ರಪತಿ : ನನಗೆ ಕರ್ನಾಟಕಕ್ಕೆ ಬರಲು ತುಂಬಾ ಸಂತೋಷ ,ನಿಮ್ಮ ಜೊತೆ ಇರುವುದು ತುಂಬಾ ಸಂತೋಷ ಎಂದು ಕನ್ನಡದಲ್ಲಿ ಮಾತು ಪ್ರಾರಂಭ ಮಾಡುವ ಮೂಲಕ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಕನ್ನಡ ಭಾಷೆಯ ಹಾಗೂ ಕರ್ನಾಟಕ ಜನರ ಮೇಲೆ ಪ್ರೀತಿ ಅಭಿವ್ಯಕ್ತಿ ಪಡಿಸಿದರು.

ಆಸ್ಪತ್ರೆ ಅತ್ಯಂತ ಸುಸಜ್ಜಿತ ವಾಗಿ ನಿರ್ಮಾಣವಾಗಿದೆ. ಇದಕ್ಕೆ ಇನ್ನಷ್ಟು ಹೆಚ್ಚಿನ ಸೌಲಭ್ಯ ಸೇರ್ಪಡೆಯಾಗಲಿ ಹೃದ್ರೋಗ ಸೇರಿದಂತೆ ಹೆಚ್ಚು ವಿಭಾಗಳಲ್ಲಿ ಜಿಲ್ಲೆಯ ಬಡ ಜನರಿಗೆ ಇಲ್ಲೇ  ಉಚಿತ  ಸೇವೆ  ದೊರೆಯುವಂತಾಗಲಿ ಎಂದು ಅವರು ಹೇಳಿದರು 

ಚಾಮರಾಜನಗರಕ್ಕೆ  ರಾಜರ  ಇತಿಹಾಸ ಪೌರಾಣಿಕ ಹಿನ್ನಲೆಯ ಮಹತ್ವ ಇದೆ ಇದು ಹಿರಿಮೆಯ ಸಂಕೇತ.ಜಯ ಚಾಮರಾಜರಾದಿಯಾಗಿ ಜಿಲ್ಲೆಯ ಪ್ರಗತಿಗೆ ಕೊಡುಗೆ ನೀಡಿದ ರಾಜ ಮಹಾರಾಜರು ಸ್ಮರಣೀಯರು ಎಂದ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ವೈದ್ಯಕೀಯ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಅತ್ಯಂತ ಗಮನ ಹರಿಸಿ ಕಲಿತು ಜನರ ಸೇವೆ ಮಾಡಿ ಎಂದು ರಾಷ್ಟ್ರಪತಿ ಕಿವಿ ಮಾತು ಹೇಳಿದರು.

ರಾಜ್ಯದಲ್ಲಿ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಆರೋಗ್ಯ ಸೇವೆ ಯಶಸ್ವಿಯಾಗಿ ಅನುಷ್ಠಾನ ಗೊಳಿಸಿರುವುದು ಅಭಿನಂದನಾರ್ಹ. ಎಲ್ಲಾ ಜಿಲ್ಲೆಗಳಲ್ಲಿ ವೈದ್ಯಕೀಯ ಶಿಕ್ಷಣ ಸೌಲಭ್ಯ ವೃದ್ಧಿ ಯಾಗಬೇಕು ,ಕುಗ್ರಾಮಗಳಿಗೂ  ಸೇವೆ ತಲುಪಬೇಕು ಎಂದು ಕರೆ ನೀಡಿದರು.

ರಾಜ್ಯದಲ್ಲಿ ಕೋವಿಡ್- 19 ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಸಂಕಷ್ಟ ದ ಸಂದರ್ಭದಲ್ಲಿ ಸೇವೆ ಮಾಡಿದ ವೈದ್ಯರು ಸೇರಿದಂತೆ ಎಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ ಹೇಳಿದ ಅವರು. ಲಸಿಕೆ ಕಂಡು ಹಿಡಿದ ವಿಜ್ಞಾನಿಗಳು ಅಭಿನಂದನಾರ್ಹರು ಎಂದರು 

ನಮ್ಮ ದೇಶ ವಿವಿಧತೆಯಲ್ಲಿ ಏಕತೆ ಹೋದಿರುವ ದೇಶ ಎಲ್ಲರೂ ಒಂದಾಗಿ ಅದರ ಉನ್ನತಿಗೆ ಶ್ರಮಿಸೋಣ ಎಂದರು ರಾಷ್ಟ್ರಪತಿ ಹೇಳಿದರು.

ಇದೇ ವೇಳೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ, ವೃತ್ತಿ ಶಿಕ್ಷಣದಲ್ಲಿ ನೀಡುವಲ್ಲಿ ದೇಶದಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ. ಕರ್ನಾಟಕದ ಅತ್ಯುತ್ತಮ ವೈದ್ಯಕೀಯ ಕಾಲೇಜುಗಳಲ್ಲಿ ಒಂದಾದ ಸಿಮ್ಸ್, ಶಿಕ್ಷಣ ಸೇವೆ ಮತ್ತು ಸಂಶೋಧನೆಯ ಗುರಿಯೊಂದಿಗೆ, ಪ್ರತಿಯೊಬ್ಬರಿಗೂ ತ್ವರಿತ ಸುಲಭ ಹಾಗೂ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುವುದು ಮತ್ತು  ರೋಗಿಗಳ ಹಾರೈಕೆ ಹಾಗೂ ಅತ್ಯುತ್ತಮ ವೈದ್ಯರು ದಾದಿಯರು ಮತ್ತು ಪ್ಯಾರ ವೈದ್ಯಕೀಯ ಸಿದ್ಧತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದರು.

ಆರೋಗ್ಯ ಸೇವೆಗಳನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಆಸ್ಪತ್ರೆಯು  ಅತ್ಯಾಧುನಿಕ ವೈದ್ಯಕೀಯ ಸವಲತ್ತು  ಸುಸಜ್ಜಿತ ಪ್ರಯೋಗಾಲಯ, ಐಸಿಯು ವಾರ್ಡ್, ಒಪಿಡಿ, ತುರ್ತು ಒಪಿಡಿ ಜೊತೆಗೆ ಹೃದ್ರೋಗ, ನೆಫ್ರೋನಂತಹ ಸೂಪರ್-ಸ್ಪೆಷಾಲಿಟಿಗಳನ್ನು ಹೊಂದಿದೆ -ಯುರಾಲಜಿ ಮತ್ತು ನರವಿಜ್ಞಾನ ಅತ್ಯಾಧುನಿಕ ಉಪಕರಣಗಳೊಂದಿಗೆ ವಿವಿಧ ಸೌಲಭ್ಯಗಳೂ ಆಸ್ಪತ್ರೆಯಲ್ಲಿ ಲಭ್ಯವಿದೆ ಎಂದು ಮಾಹಿತಿ ನೀಡಿದರು.

2020-21ನೇ ಸಾಲಿನ ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ, ಸಿಮ್ಸ್ ಉತ್ತಮ ಕೆಲಸ ಮಾಡುವ ಮೂಲಕ ಹಾಗೂ ಕೋವಿಡ್ -19 ರ ನಿರ್ವಹಣೆಯಲ್ಲಿ ರಾಜ್ಯದಲ್ಲಿ ಉತ್ತಮ ಸ್ಥಾನವನ್ನು ಪಡೆದಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ. ಜಿಲ್ಲೆಯನ್ನು ಕೋವಿಡ್ ಮುಕ್ತವಾಗಿಸಲು ಜಿಲ್ಲಾಡಳಿತದೊಂದಿಗೆ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.

ಒಂದು ರಾಷ್ಟ್ರದ ಭವಿಷ್ಯ ಉಜ್ವಲವಾಗುವುದು ಅದರ ಹಿಂದಿನ ಅನುಭವಗಳು ಮತ್ತು ಪರಂಪರೆಯೊಂದಿಗೆ ಸಾಗಿದಾಗ ಮಾತ್ರ. ಭಾರತವು ಹೆಮ್ಮೆ ಪಡಲು ವಿಶಾಲವಾದ ಸಂಪತ್ತನ್ನು ಹೊಂದಿದೆ, ಶ್ರೀಮಂತ ಇತಿಹಾಸ, ಪ್ರಜ್ಞಾಪೂರ್ವಕ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಆದ್ದರಿಂದ, 75 ವರ್ಷಗಳ ಸ್ವಾತಂತ್ರ್ಯದ ಈ ಸಂದರ್ಭವನ್ನು ಇಂದಿನ ಪೀಳಿಗೆಗೆ ಅಮೃತದಂತೆ ನೀಡಲಾಗುವುದು. ಇಂತಹ ಅಮೃತವು ಪ್ರತಿ ಕ್ಷಣವೂ ದೇಶಕ್ಕಾಗಿ ಬದುಕಲು, ದೇಶಕ್ಕಾಗಿ ಏನನ್ನಾದರೂ ಮಾಡಲು ನಮಗೆ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದರು.

ಸ್ವಾತಂತ್ರ್ಯ ಚಳವಳಿಯ ಇತಿಹಾಸದಂತೆ, 75 ವರ್ಷಗಳ ಪ್ರಯಾಣವು ಭಾರತೀಯರ ಶ್ರಮ, ನಾವೀನ್ಯತೆ, ಉದ್ಯಮಶೀಲತೆಯ ಪ್ರತಿಬಿಂಬವಾಗಿದೆ. ನಾವು ನಮ್ಮ ಸಂವಿಧಾನದ ಬಗ್ಗೆ ಹೆಮ್ಮೆ ಪಡುತ್ತೇವೆ, ನಮ್ಮ ಪ್ರಜಾಪ್ರಭುತ್ವ ಸಂಪ್ರದಾಯಗಳ ಬಗ್ಗೆ ಹೆಮ್ಮೆ ಪಡುತ್ತೇವೆ, ಭಾರತವು ಪ್ರಜಾಪ್ರಭುತ್ವದ ತಾಯಿ, ಪ್ರಜಾಪ್ರಭುತ್ವವನ್ನು ಬಲಪಡಿಸುವ ಮೂಲಕ ಇನ್ನೂ ಅಭಿವೃದ್ಧಿಯ ಹಾದಿಯಲ್ಲಿ  ಮುಂದುವರಿಯುತ್ತಿದೆ ಎಂದರು.

ಕರ್ನಾಟಕ ರಾಜ್ಯದ ದಕ್ಷಿಣದಲ್ಲಿರುವ ಅರಣ್ಯ ವ್ಯಾಪ್ತಿಯಿಂದ ಆವರಿಸಲ್ಪಟ್ಟಿರುವ  ಚಾಮರಾಜನಗರ ಜಿಲ್ಲೆಯ ಹಿಂದುಳಿದವರು, ಬಡತನ ರೇಖೆಗಿಂತ ಕೆಳಗಿರುವವರು ಸೇರಿದಂತೆ ಪ್ರತಿಯೊಬ್ಬರನ್ನು ಸಿಮ್ಸ್ ಬೋಧನಾ ಆಸ್ಪತ್ರೆ ತಲುಪಿ, ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ.

ಆರೋಗ್ಯ ದೇವರು ಕೊಟ್ಟ ದೊಡ್ಡ ಸಂಪತ್ತು. ಆರೋಗ್ಯಕರ ಮನಸ್ಸು ದೇಹದಲ್ಲಿ ವಾಸಿಸುತ್ತದೆ. ಈ ಆಧುನಿಕ ವಿಶೇಷ ಸೌಲಭ್ಯ ಹೊಂದಿರುವ ಆಸ್ಪತ್ರೆಯು ಸ್ಥಳೀಯರಿಗೆ ಆರೋಗ್ಯ ಸೇವೆಗಳನ್ನು ಒದಗಿಸಲಿದ್ದು, ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ  ಆದ ಕೊಡುಗೆ ನೀಡಲಿದೆ ಎಂದು ನಾನು ಭಾವಿಸುತ್ತೇನೆ ಎಂದ ಅವರು, ಆರೋಗ್ಯ ಸೇವೆಯು ದೈವಿಕ ಸೇವೆಯಾಗಿದೆ, ಈ ದೈವಿಕ ಸೇವಾ ಕಾರ್ಯದಲ್ಲಿ ನೀವು ಯಶಸ್ಸನ್ನು ಪಡೆಯುತ್ತಿರಿ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಥಮ ಮಹಿಳೆ ಸವಿತಾ ಕೋವಿಂದ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಸೋಮಶೇಖರ್, ಡಾ. ಕೆ. ಸುಧಾಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News