ಚಾಮರಾಜನಗರಕ್ಕೆ ಬಾರದೆ ಕರ್ತವ್ಯ ಲೋಪ ಮಾಡಲಾರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2021-10-07 15:11 GMT

ಚಾಮರಾಜನಗರ: ತಾನು ಚಾಮರಾಜನಗರಕ್ಕೆ ಬರುವ ಬಗ್ಗೆ ಹಲವಾರು ಚರ್ಚೆಗಳು ನಡೆಯುತ್ತಿತ್ತು. ಚಾಮರಾಜನಗರಕ್ಕೆ ಮುಖ್ಯಮಂತ್ರಿಯಾದವರು ಅಧಿಕಾರದಲ್ಲಿ ಇರುವಾಗ ಹೋದರೆ ಅಧಿಕಾರ ಕಳೆದು ಕೊಳ್ಳುವರು ಎಂದು , ಆದರೆ ಚಾಮರಾಜನಗರಕ್ಕೆ ಬರಲು ಒಳ್ಳೇಯ ಮನಸ್ಸು ಇರಬೇಕು, ಅಧಿಕಾರ ಎಂದಿಗೂ ಶಾಶ್ವತವಲ್ಲ, ಇಲ್ಲಿಗೆ ಬರದಿದ್ದರೂ ಸಹ ಅಧಿಕಾರ ಹೋಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಮಿಕವಾಗಿ ನುಡಿದರು.

ಚಾಮರಾಜನಗರ ಹೊರ ವಲಯದಲ್ಲಿ 160 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಮೆಡಿಕಲ್ ಕಾಲೇಜು ಬೋಧನಾ ಹೈಟೆಕ್ ಆಸ್ಪತ್ರೆ ಲೋಕಾರ್ಪಣೆ ಸಮಾರಂಭದಲ್ಲಿ ರಾಷ್ಟ್ರಪತಿಗಳೊಂದಿಗೆ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೂ ಹೋಗಲು ನಿರ್ಧಾರ ಮಾಡಿದ್ದೇನೆ, ಚಾಮರಾಜನಗರಕ್ಕೆ ಬರುವುದು ಮುಖ್ಯಮಂತ್ರಿಗಳ ಕರ್ತವ್ಯ , ಇಲ್ಲಿಗೆ ಬಾರದೆ ನಾನು ಕರ್ತವ್ಯ ಲೋಪ ಮಾಡಲಾರೆ ಎನ್ನುವ ಮೂಲಕ ಇಲ್ಲಿಗೆ ಬಾರದ ಮುಖ್ಯಮಂತ್ರಿಗಳ ಕಾರ್ಯವೈಖರಿಯನ್ನು ಪರೋಕ್ಷವಾಗಿ ಖಂಡಿಸಿದರು.

ಮುಂದಿನ ದಿನದಲ್ಲಿ ಚಾಮರಾಜನಗರಕ್ಕೆ ಬಂದು ಜಿಲ್ಲಾಡಳಿತ ಭವನದಲ್ಲಿ ಜಿಲ್ಲೆಯ ಅಭಿವೃದ್ದಿ ಕೆಲಸ ಕಾರ್ಯಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸುವೆನು ಇದರಲ್ಲಿ ಅನುಮಾನ ಬೇಡ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News