×
Ad

ರಾಜ್ಯದ ಶಾಖೋತ್ಪನ್ನ ಕೇಂದ್ರಗಳಲ್ಲಿ ಕಲ್ಲಿದ್ದಲು ಕೊರತೆ: ಆರ್‍ಟಿಪಿಎಸ್‍ನ 8 ಘಟಕಗಳಲ್ಲಿ 4 ಸ್ಥಗಿತ

Update: 2021-10-07 20:58 IST
ಸಾಂದರ್ಭಿಕ ಚಿತ್ರ

ರಾಯಚೂರು, ಅ.7: ರಾಜ್ಯಕ್ಕೆ ವಿದ್ಯುತ್ ಲೋಡ್ ಶೆಡ್ಡಿಂಗ್ ಎದುರಾಗುವ ಸಾಧ್ಯತೆಯಿದೆ. ಆರ್‍ಟಿಪಿಎಸ್(ರಾಯಚೂರು ವಿದ್ಯುತ್ ಶಾಖೋತ್ಪನ್ನ ಕೇಂದ್ರ)ನ ನಾಲ್ಕು ವಿದ್ಯುತ್ ಉತ್ಪಾದನಾ ಘಟಕಗಳು ಸ್ಥಗಿತಗೊಂಡಿವೆ. ಒಟ್ಟು 8 ಘಟಕಗಳಿಂದ 1,720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, ಕಲ್ಲಿದ್ದಲ್ಲು ಸಮಸ್ಯೆಯಿಂದಾಗಿ 1, 3, 7, 8ನೆ ಘಟಕಗಳು ಸ್ಥಗಿತಗೊಂಡಿವೆ. 

ಇನ್ನುಳಿದ 2, 4, 5, 6ನೆ ಘಟಕಗಳಿಂದ 630 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಆರ್‍ಟಿಪಿಎಸ್‍ನಲ್ಲಿರುವ 8 ವಿದ್ಯುತ್ ಘಟಕಗಳು ವಿದ್ಯುತ್ ಉತ್ಪಾದನೆ ಮಾಡಬೇಕಾದರೆ 25 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಬೇಕಾಗುತ್ತದೆ. ಆದರೆ ಕಲ್ಲಿದ್ದಲ್ಲು ಘಟಕದಿಂದ ಬೇಡಿಕೆಯಂತೆ ಪೂರೈಕೆಯಾಗದೇ ಮಹಾರಾಷ್ಟ್ರ ಸಿಂಗರೇಣಿಯ ಕೂಲ್ ಮೈನಿಂಗ್‍ನಿಂದ ಎರಡು ರೇಕ್(3,200ರಿಂದ 3,600 ಟನ್), ನಾಗಪುರದಿಂದ ಒಂದು ರೇಕ್ ಸೇರಿದಂತೆ 3-4 ರೇಕ್‍ಗಳು ಸರಬರಾಜು ಆಗುತ್ತಿದ್ದು, ಇದರಿಂದ 4 ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.

ಇನ್ನುಳಿದ ಘಟಕಗಳು ಕಾರ್ಯ ನಿರ್ವಹಿಸಲು ಕಲ್ಲಿದ್ದಲ್ಲು ಸಮಸ್ಯೆ ತಲೆದೋರಿದೆ. ಒಂದು ವೇಳೆ ಈ ಪೂರೈಕೆಯೂ ಸ್ಥಗಿತವಾದರೆ ವಿದ್ಯುತ್ ಉತ್ಪಾದನೆ ಕಡಿಮೆಯಾಗಿ ವಿದ್ಯುತ್ ಲೋಡ್‍ಶೆಡ್ಡಿಂಗ್ ಸಮಸ್ಯೆ ಎದುರಿಸಬೇಕಾಗುತ್ತದೆ. ಸೌರ ಹಾಗೂ ಪವನ ವಿದ್ಯುತ್ ಶಕ್ತಿಯಿಂದ ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ಆದರೆ ಹವಾಮಾನದಲ್ಲಿನ ಬದಲಾವಣೆಯಿಂದಾಗಿ ನಿರೀಕ್ಷೆಯಂತೆ ವಿದ್ಯುತ್ ಉತ್ಪಾದನೆಯಾಗುತ್ತಿಲ್ಲ.

ಆರ್‍ಟಿಪಿಎಸ್‍ನ 8 ಘಟಕಗಳಲ್ಲಿ, 4 ಘಟಕಗಳಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇನ್ನುಳಿದ ಘಟಕಗಳಿಗೆ ಬೇಕಾಗುವ ಕಲ್ಲಿದ್ದಲ್ಲು ಪೂರೈಕೆಯಾಗಿಲ್ಲ. ಕಲ್ಲಿದ್ದಲಿನ ಸಮಸ್ಯೆಯಿಂದ 4 ಘಟಕಗಳನ್ನು ಬಂದ್ ಮಾಡಲಾಗಿದೆ. ಈಗ ನಾಲ್ಕೈದು ರೇಕ್‍ಗಳ ಕಲ್ಲಿದ್ದಲು ಬರುತ್ತಿದೆ. ಅದರಲ್ಲಿ 4 ಘಟಕಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಆರ್‍ಟಿಪಿಎಸ್ ಇಡಿ ವೆಂಕಟಾಚಾಲಪತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News