×
Ad

ಮಗ ಮಾಡಿದ ಭ್ರಷ್ಟಾಚಾರದ ಕಾರಣಕ್ಕೆ ಬಿಎಸ್ ವೈ ಅಧಿಕಾರದಿಂದ ಕೆಳಗಿಳಿದರು: ಎಚ್.ವಿಶ್ವನಾಥ್ ಆರೋಪ

Update: 2021-10-07 21:41 IST

ಮೈಸೂರು,ಅ.7: ಮಗ ಮಾಡಿದ ಭ್ರಷ್ಟಾಚಾರದ ಕಾರಣಕ್ಕೆ  ಬಿಎಸ್ ಯಡಿಯೂರಪ್ಪ ಅಧಿಕಾರದಿಂದ ಕೆಳಗೆ ಇಳಿದರು ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿಳಿಸಿದರು.

ಮಾಜಿ ಸಿಎಂ ಬಿಎಸ್ ವೈ ಆಪ್ತ ಉಮೇಶ್ ಮನೆ ಮೇಲೆ ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಗುರುವಾರ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಎಂಎಲ್‍ಸಿ ಎಚ್.ವಿಶ್ವನಾಥ್, ನಾನು ಹಿಂದೆ ಮಾಡಿದ ಆರೋಪಗಳು ಈ ದಾಳಿ ಮೂಲಕ ಸತ್ಯವಾಗಿದೆ. ವಿಜಯೇಂದ್ರ ಮಾಡಿದ ಮಹಾ ಭ್ರಷ್ಟಾಚಾರಕ್ಕೆ ಈ ದಾಳಿ ಇನ್ನೊಂದು ಸಾಕ್ಷಿ. ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗೆ ಇಳಿದಿದ್ದು ವಯಸ್ಸಿನ ಕಾರಣಕ್ಕೆ ಅಲ್ಲ. ಅವರ ಮಗನ ಭ್ರಷ್ಟಾಚಾರದಿಂದಾಗಿ ಕೆಳಗಿಳಿದರು ಎಂದರು.

ಈ ದಾಳಿ ಪರೋಕ್ಷವಾಗಿ ವಿಜಯೇಂದ್ರ ಮೇಲೆ ಆದ ದಾಳಿಯಾಗಿದೆ. ತಂದೆಯ ಪೆನ್, ನಾಲಗೆ ಎಲ್ಲವನ್ನೂ ಕಿತ್ತುಕೊಂಡು ತಂದೆಯ ಮರ್ಯಾದೆಯನ್ನು ಕಳೆದು ಪಕ್ಷದ ಮರ್ಯಾದೆಯನ್ನೂ ಕಳೆದರು ಹೇಳಿದರು.

ಇಂದು ಬೆಳಗ್ಗೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಆಪ್ತಸಹಾಯಕ ಉಮೇಶ್ ಸೇರಿ 50ಕ್ಕೂ ಹೆಚ್ಚುಕಡೆಗಳಲ್ಲಿ  ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News