ಬೆಂಗಳೂರು; ಡ್ರೀಮ್ 11 ಆನ್‍ಲೈನ್ ಗೇಮ್ ವಿರುದ್ಧ ಎಫ್‍ಐಆರ್

Update: 2021-10-08 15:10 GMT

ಬೆಂಗಳೂರು, ಅ.8: ಡ್ರೀಮ್ 11 ಆನ್‍ಲೈನ್ ಗೇಮ್ ಆ್ಯಪ್ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಮಂಜುನಾಥ್ ಎಂಬುವರು ದೂರು ನೀಡಿದ್ದು, ಡ್ರೀಮ್ 11 ಕಂಪೆನಿ ಸಂಸ್ಥಾಪಕ, ನಿರ್ದೇಶಕನಾಗಿರುವ ಭವಿತ್ ಸೇತ್ ಹಾಗೂ ಹರೀಶ್ ಜೈನ್ ಜನರಿಗೆ ಆನ್‍ಲೈನ್‍ನಲ್ಲಿ ಗೇಮ್ ಆಡಿ ಹಣ ಮಾಡಬಹುದು ಎಂದು ಪ್ರಚೋದನೆ ಮಾಡುತ್ತಿದ್ದಾರೆ.ಅಲ್ಲದೆ, ಹಲವರು ಈಗಾಗಲೇ ಗೆದ್ದಿದ್ದಾರೆ. ನೀವು ಕೂಡ ಗೆದ್ದು ಹಣ ಮಾಡಬಹುದು. ಶ್ರೀಮಂತರಾಗಬಹುದು ಎಂದು ಸುಳ್ಳು ಹೇಳಿ ಜನರನ್ನು ಯಾಮಾರಿಸುತ್ತಿದ್ದರು. ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News