ಶಾಸಕ ಸಾ.ರಾ.ಮಹೇಶ್, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸಂಘರ್ಷಕ್ಕೆ ತೆರೆ

Update: 2021-10-08 17:45 GMT

ಮೈಸೂರು,ಅ.8: ಶಾಸಕ ಸಾ.ರಾ.ಮಹೇಶ್ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧದ ಸಂಘರ್ಷಕ್ಕೆ ತಿರುವು ಸಿಕ್ಕಿದೆ. ಕ್ಷಮೆಯಾಚಿಸುವ ಮೂಲಕ ಈ ಸಂಘರ್ಷಕ್ಕೆ ರೋಹಿಣಿ ಸಿಂಧೂರಿ ಅವರು ತೆರೆಯನ್ನು ಎಳೆದಿದ್ದಾರೆ.

ಕಾಗದ ಪತ್ರದ ಸಮಿತಿಯ ಸಭೆಯಲ್ಲಿ ನಿರ್ಲಕ್ಷ್ಯ ತೋರಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಸರ್ಕಾರದ ಶಿಷ್ಟಾಚಾರವನ್ನು ಪಾಲಿಸುತ್ತೇನೆ. ಯಾವುದೇ ಸಮಿತಿಗಾಗಲಿ ಶಾಸಕರೊಂದಿಗಾಗಲಿ ಅಗೌರವ ತೋರುವ ಉದ್ದೇಶವಿಲ್ಲ. ಎಲ್ಲರೊಂದಿಗೂ ಗೌರವದಿಂದ ನಡೆದುಕೊಂಡು ಹೋಗುತ್ತೇವೆ ಎಂದು ಕ್ಷಮೆ ಯಾಚಿಸಿದ್ದಾರೆ.

ಸಾ.ರಾ.ಮಹೇಶ್ ನೇತೃತ್ವದಲ್ಲಿ ನಡೆದಿದ್ದ ಕಾಗದ ಪತ್ರಗಳ ಸಮಿತಿ ಸಭೆಯಲ್ಲಿ ರೋಹಿಣಿ ಸಿಂಧೂರಿಯವರ ಮೇಲೆ ಆರೋಪ ಮಾಡಲಾಗಿತ್ತು.

ಸಮಿತಿ ಸಭೆಯಲ್ಲಿ ಗೈರಾಗಿದ್ದ ಕಾರಣ ಮತ್ತು ಶ್ರೀರಾಮ ಸಕ್ಕರೆ ಕಾರ್ಖಾನೆಯ ಸಭೆಗೂ ಗೈರಾಗಿದ್ದ ಕಾರಣ ಸಾ.ರಾ.ಮಹೇಶ್ ರೋಹಿಣಿ ಸಿಂಧೂರಿಯವರ ಮೇಲೆ ಹಕ್ಕು ಚ್ಯುತಿಯನ್ನು ಮಂಡಿಸಿದ್ದರು. ಹಕ್ಕುಬಾಧ್ಯತೆಗಳ ಸಮಿತಿಯ ಮುಂದೆ ಇದೀಗ ರೋಹಿಣಿ ಸಿಂಧೂರಿಯವರು ಕ್ಷಮೆ ಯಾಚಿಸಿ ಇನ್ನು ಮುಂದೆ ಸರ್ಕಾರದ ಶಿಷ್ಟಾಚಾರ ಪಾಲಿಸುತ್ತೇನೆ. ಯಾವುದೇ ಸಮಿತಿ ಶಾಸಕರೊಂದಿಗೆ ಅಗೌರವ ತೋರಲ್ಲ ಎಂದಿದ್ದಾರೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಯ ಇಲಾಖೆಯ ನಿಯಮದಂತೆ ಶಿಷ್ಟಾಚಾರ ಪಾಲಿಸುತ್ತೇವೆ ಎಂದಿದ್ದಾರೆ ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News