''ಉಪಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗೆ ಜನರು ಮತ ನೀಡುತ್ತಾರೆ'': ಸಿದ್ದರಾಮಯ್ಯ

Update: 2021-10-08 18:26 GMT

ಬೆಂಗಳೂರು: ವಿಧಾನಸಭೆ ಉಪಚುನಾವಣೆಗೆ  ಸಿದ್ಧತೆಯಲ್ಲಿ ತೊಡಗಿಸಿಕೊಂಡಿರುವ ರಾಜಕೀಯ ಪಕ್ಷಗಳು ಸಿಂದಗಿ ಹಾಗೂ ಹಾನಗಲ್ ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರಚಾರ, ಸಾರ್ವಜಿನಿಕ ಸಭೆಗಳನ್ನು ನಡೆಸುತ್ತಿದೆ. 

ಇನ್ನು ಉಪಚುನಾವಣೆಗೆ ಸಂಬಂಧಿಸಿ ಸರಣಿ ಟ್ವೀಟ್ ಗಳನ್ನು ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ,  ''ಜೆಡಿಎಸ್ ಪಕ್ಷದವರು ಎರಡೂ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದರ ಹಿಂದಿನ ಉದ್ದೇಶ ಏನೇ ಇರಬಹುದು, ಆದರೆ ಮತದಾರರು ಮೂರ್ಖರಲ್ಲ. ಜನ ಕಾಂಗ್ರೆಸ್ ನ ಗೆಲ್ಲುವ ಅಭ್ಯರ್ಥಿಗೆ ಮತ ನೀಡುತ್ತಾರೆಯೇ ಹೊರತು ಸೋಲುವ ಅಭ್ಯರ್ಥಿಗಲ್ಲ'' ಎಂದು ತಿಳಿಸಿದ್ದಾರೆ. 

''ಅಗತ್ಯ ವಸ್ತುಗಳ ಬೆಲೆಯೇರಿಕೆ, ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಾಗೂ ನಿಷ್ಕ್ರಿಯತೆ ಬಗ್ಗೆ ಜನರಿಗಿರುವ ಅಸಹನೆಯನ್ನು ಹೊರಹಾಕಲು ಈ ಬಾರಿಯ ಉಪಚುನಾವಣೆಯನ್ನು ಅಸ್ತ್ರವಾಗಿ ಬಳಸಿಕೊಳ್ಳಲಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ'' ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News