×
Ad

'ವಿಜಯೇಂದ್ರ ಸರ್ವೀಸ್ ಟ್ಯಾಕ್ಸ್' ಇನ್ನೂ ಜಾರಿಯಲ್ಲಿದೆಯೇ?: ಕಾಂಗ್ರೆಸ್ ಪ್ರಶ್ನೆ

Update: 2021-10-09 18:38 IST

ಬೆಂಗಳೂರು, ಅ.9: ಬಿಜೆಪಿ ಆಡಳಿತದಲ್ಲಿ ಯಾವ ಇಲಾಖೆಯೂ ಭ್ರಷ್ಟಾಚಾರದಿಂದ ಹೊರತಾಗಿಲ್ಲ. ಅಬಕಾರಿ ಇಲಾಖೆಯ ಜ್ಯೇಷ್ಠತಾ ಪಟ್ಟಿಯ ಗೋಲ್ಮಾಲ್ ಸಚಿವರ ಗಮನಕ್ಕೆ ಬಂದಿಲ್ಲ ಎನ್ನುತ್ತಿದ್ದಾರೆ, ಹಾಗಾದರೆ ವಿಜಯೇಂದ್ರ ಸರ್ವೀಸ್ ಟ್ಯಾಕ್ಸ್ ಇನ್ನೂ ಜಾರಿಯಲ್ಲಿದೆಯೇ? ‘ಸೂಪರ್ ಸಿಎಂ’ ಹಸ್ತಕ್ಷೇಪ ಬಸವರಾಜ ಬೊಮ್ಮಾಯಿ ಅವರ ಸರಕಾರದಲ್ಲೂ ಮುಂದುವರೆದಿದೆಯೇ ರಾಜ್ಯ ಬಿಜೆಪಿ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಬಿಸಿಯೂಟ ನೀಡುವವರ ತಂಗಳೂಟವನ್ನೂ ಕಿತ್ತುಕೊಂಡಿದೆ ಬಿಜೆಪಿಯ ಹೃದಯಶೂನ್ಯ ಸರಕಾರ. ಬಿಸಿ ಊಟ ತಯಾರಕರಿಗೆ ಕಳೆದ 5 ತಿಂಗಳಿಂದ ಈ ನಯಾಪೈಸೆ ಸಂಬಳ ನೀಡಲಿಲ್ಲ, ತಾಂತ್ರಿಕ ತೊಡಕಿನ ಸಬೂಬು ಹೇಳಿ ಕೊರೋನ, ಲಾಕ್‍ಡೌನ್, ಬೆಲೆ ಏರಿಕೆಗಳಿಂದ ಜೀವನ ನಿರ್ವಹಣೆಗೆ ಕಷ್ಟಪಡುತ್ತಿರುವ ಬಡವರ್ಗಕ್ಕೆ ಸಂಬಳ ನೀಡದೆ ಹಿಂಸಿಸುವುದೇಕೆ ರಾಜ್ಯ ಬಿಜೆಪಿ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News