ಜಮ್ಮು ಕಾಶ್ಮೀರದಲ್ಲಿ ನಾಗರಿಕರ ಹತ್ಯೆ ಖಂಡನೀಯ: ವೆಲ್ಫೇರ್ ಪಾರ್ಟಿ

Update: 2021-10-09 17:15 GMT

ಬೆಂಗಳೂರು, ಅ.9: ಜಮ್ಮು ಮತ್ತು ಕಾಶ್ಮೀರದ ನಾಗರಿಕರ ಹತ್ಯೆಯನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಬಲವಾಗಿ ಖಂಡಿಸುತ್ತದೆ ಹಾಗೂ ಇದು ಸಾಮರಸ್ಯವನ್ನು ಹದಗೆಡಿಸುವಂತಹ ಪ್ರಯತ್ನವಾಗಿದೆ ಎಂದು ಹೇಳಿದೆ.

ಕಾಶ್ಮೀರದ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಕೊಲ್ಲುತ್ತಿರುವುದು ಬಹಳ ದುಃಖಕರವಾದದ್ದು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಡಾ.ಎಸ್.ಕ್ಯೂ.ಆರ್.ಇಲ್ಯಾಸ್ ಹೇಳಿದ್ದಾರೆ.

ಈ ಪರಿಸ್ಥಿತಿಯು ಕಲಂ 370 ತೆಗೆದುಹಾಕಿದ ನಂತರ ಜಮ್ಮು ಕಾಶ್ಮೀರದಲ್ಲಿ ಎಲ್ಲವೂ ಸಾಮಾನ್ಯವಾಗಿದೆ ಹಾಗೂ ಪರಿಸ್ಥಿತಿ ಉತ್ತಮಗೊಳ್ಳುತ್ತಿದೆ ಎಂಬ ಮೋದಿ ಸರಕಾರದ ವಾದವನ್ನು ವಿರೋಧಿಸುತ್ತದೆ. ಹೊರತಾಗಿ 90 ರ ಅಸ್ಥಿರತೆ ಕಣಿವೆಯಲ್ಲಿ ಮರಳಿ ಬಂದಿದೆ ಎಂದು ಇಲ್ಯಾಸ್ ಟೀಕಿಸಿದ್ದಾರೆ.

ಕಾಶ್ಮೀರದಲ್ಲಿ ಸಾಂಪ್ರದಾಯಿಕ ಗಲಭೆ ಹುಟ್ಟಿಸಲು ಹಾಗೂ ಕಾಶ್ಮೀರದ ಹಳೇ ಸಂಪ್ರದಾಯವಾದ ಸಾಮರಸ್ಯ ಮತ್ತು ಭ್ರಾತೃತ್ವವನ್ನು ಕೆಡಿಸಲು ಈ ಭಯಂಕರ ಹತ್ಯಾಕಾಂಡವು ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ಕಣಿವೆಯಲ್ಲಿನ ಹಲ್ಲೆಗಳು ಬಹುಸಂಖ್ಯಾತರ ಹೆಸರು ಕೆಡಿಸುವ ಮತ್ತು ಅಲ್ಪಸಂಖ್ಯಾತರಲ್ಲಿ ಭಯ, ಅಭದ್ರತೆಯನ್ನು ಹುಟ್ಟಿಸುವ ಷಡ್ಯಂತ್ರದ ಒಂದು ಭಾಗವಾಗಿದೆ. ಮುಸ್ಲಿಮರನ್ನು ಗುರಿಯಾಗಿಸಿ ಪಿಶಾಚಿಕರಿಸುವುದರಿಂದ ಹಾಗೂ ದ್ವೇಷ ಉದ್ದೀಪನಗೊಳಿಸುವುದರಿಂದ ದೇಶದ ಬೇರೆ ಭಾಗಗಳಲ್ಲಿ ಸಾಂಪ್ರದಾಯಿಕ ಒತ್ತಡ ಉಂಟಾಗುವ ಸಾಧ್ಯತೆ ಇದೆ ಎಂದು ಇಲ್ಯಾಸ್ ಪ್ರಕಟಣೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News