ಉತ್ತಮ ಸಮಾಜ ನಿಮಾಣಕ್ಕೆ ಮಕ್ಕಳಲ್ಲಿ ಮೌಲ್ಯವನ್ನು ಅಳವಡಿಸಿ: ಸಂತೋಷ್ ಹೆಗ್ಡೆ

Update: 2021-10-09 18:09 GMT

ಹಾಸನ: ಉತ್ತಮ ಸಮಾಜ ನಿರ್ಮಾಣವಾಗಬೇಕಾದರೇ ಮೊದಲು ಮಕ್ಕಳಿಂದಲೇ ಮೌಲ್ಯಗಳನ್ನು ತುಂಬುವ ಕೆಲಸ ಮಾಡಬೇಕು. ಇನ್ನು ಜನರಿಂದಲೇ ಚುನಾಯಿತರಾದ ರಾಜಕಾರಣಿಗಳು ಜನರ ಸೇವಕರೇ ಹೊರತು ಮಾಲಕರಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ತಿಳಿಸಿದ್ದಾರೆ.

ನಗರದ ಭಾರತ್ ಜಿಲ್ಲಾ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಭವನದಲ್ಲಿ ಜಿಲ್ಲಾ ಹಿರಿಯ ನಾಗರಿಕ ವೇದಿಕೆ , ಜಿಲ್ಲಾ ವಕೀಲರ ಸಂಘ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ‘ಸಾಮಾಜಿಕ ವೌಲ್ಯಗಳ ಅಗತ್ಯತೆ’ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ನಾವುಗಳು ಮೊದಲು ಮಾನವಿಯತೆ ಬೆಳೆಸಿಕೊಂಡು ಮಕ್ಕಳಿಗೆ ಹಾಗೂ ಯುವಕ-ಯುವತಿಯರಲ್ಲಿ ಮಾನವಿಯತೆ ಬಿತ್ತುವ ಕೆಲಸ ಆಗಬೇಕಾಗಿದೆ. ಇಂದಿನ ಮಕ್ಕಳಲ್ಲಿ ವೌಲ್ಯ ತುಂಬುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಇಂದು ಮಾಧ್ಯಮವು ಕೂಡ ಎತ್ತ ಕಡೆ ಸಾಗುತ್ತಿದೆ. ಹಣ ಕೊಟ್ಟವರ ಕಡೆ ಸುದ್ದಿ ವಾಲುತ್ತಿದೆ. ಸಾಮಾನ್ಯ ವ್ಯಕ್ತಿಯು ಸಮಸ್ಯೆಯನ್ನಿಟ್ಟುಕೊಂಡು ಕಚೇರಿಗೆ ಬಂದರೇ ಬಗೆಹರಿಸುವುದು ಸರಕಾರಿ ನೌಕರನ ಕರ್ತವ್ಯ. ನಾನೊಬ್ಬ ಸಾರ್ವಜನಿಕ ಸೇವಕ ಎಂಬ ಮನೋಭಾವದಿಂದ ಸರಕಾರಿ ನೌಕರ ಕೆಲಸ ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾರತ್ ಜಿಲ್ಲಾ ಸ್ಕೌಟ್ಸ್ ಅ್ಯಂಡ್ ಗೈಡ್ಸ್ ಭವನದಲ್ಲಿ ಜಿಲ್ಲಾ ಹಿರಿಯ ನಾಗರಿಕ ವೇದಿಕೆ, ಜಿಲ್ಲಾ ವಕೀಲರ ಸಂಘ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲ್ಲಿ ಜಿಲ್ಲಾ ಹಿರಿಯ ನಾಗರೀಕ ವೇದಿಕೆಯ ಅಧ್ಯಕ್ಷ ವೈ.ಎಸ್.ವೀರಭದ್ರಪ್ಪ, ಉಪಾಧ್ಯಕ್ಷೆ ಜಯಲಕ್ಷ್ಮೀ ರಾಜಣ್ಣಗೌಡ, ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ಎಚ್.ಪಿ.ಮೋಹನ್, ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಮೂರ್ತಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಆರ್. ಪ್ರಸನ್ನಕುಮಾರ್, ಆರ್.ಪಿ.ವೆಂಕಟೇಶ್ ಮೂರ್ತಿ, ನಗರಸಭೆ ಅಧ್ಯಕ್ಷ ಮೋಹನ್ ಕುಮಾರ್, ಎಂ.ಬಿ. ಗಿರಿಜಾಂಬಿಕ, ಎಸ್.ಎಸ್.ಪಾಷಾ, ವನಜಾಕ್ಷಮ್ಮ, ಸುರೇಶ್ ಗುರೂಜಿ ಮತ್ತಿತರರಿದ್ದರು.

ಬಿ.ಕೆ. ಮಂಜುನಾಥ್ ಸ್ವಾಗತಿಸಿದರು. ಎವಿಕೆ ಕಾಲೇಜು ಕನ್ನಡ ಪ್ರಾಧ್ಯಾಪಕ ಸೀ.ಚ.ಯತೀಶ್ವರ್ ನಿೂಪಿಸಿದರು. ಐಶ್ವರ್ಯ ಪ್ರಾರ್ಥಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News