ಕಸಾಪ ಚುನಾವಣೆ: ನ.21ಕ್ಕೆ ಮತದಾನ

Update: 2021-10-13 14:37 GMT
ಫೈಲ್ ಚಿತ್ರ

ಬೆಂಗಳೂರು, ಅ.13: ಕನ್ನಡ ಸಾಹಿತ್ಯ ಪರಿಷತ್ತಿನ(ಕಸಾಪ) ರಾಜ್ಯಾಧ್ಯಕ್ಷ, ಜಿಲ್ಲಾ ಘಟಕಗಳ ಅಧ್ಯಕ್ಷ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷರ ಸ್ಥಾನಕ್ಕೆ 2021ರ ನ.21ರಂದು ಚುನಾವಣೆ ನಡೆಯಲಿದೆ. 

ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ 21 ಅಭ್ಯರ್ಥಿಗಳು, 30 ಜಿಲ್ಲಾ ಘಟಕಗಳ ಅಧ್ಯಕ್ಷ ಸ್ಥಾನಕ್ಕೆ 223 ಅಭ್ಯರ್ಥಿಗಳು ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷ ಸ್ಥಾನಗಳಿಗೆ 16 ಅಭ್ಯರ್ಥಿಗಳು ಚುನಾವಣಾ ಅಂತಿಮ ಕಣದಲ್ಲಿದ್ದಾರೆ.  ಒಟ್ಟು ಮತದಾರರು 3,10,109.

ಚುನಾವಣಾ ಪರಿಷ್ಕಷಕೃತ ವೇಳಾಪಟ್ಟಿ:
 
ಅಂಚೆ ಮತಪತ್ರ: ಗಡಿನಾಡ, ಹೊರನಾಡ ಮತದಾರರಿಗೆ ಕೇಂದ್ರ ಚುನಾವಣಾಧಿಕಾರಿಗಳ ಕಚೇರಿಯಿಂದ ರಿಜಿಸ್ಟರ್ಡ್ ಅಂಚೆಯ ಮೂಲಕ ಮತಪತ್ರಗಳ ರವಾನೆಗೆ ನ.6 ಕೊನೆಯ ದಿನವಾಗಿದೆ. 

ನ.21ಕ್ಕೆ ಮತದಾನ: ರಾಜ್ಯದ ಎಲ್ಲ ತಾಲೂಕು, ಹಾಲಿ ಹೋಬಳಿ ಮತಕೇಂದ್ರಗಳಲ್ಲಿ ಗುರುತಿಸಲಾದ ಮತಗಟ್ಟೆಗಳಲ್ಲಿ ಹಾಗೂ ಬೆಂ.ನಗರ ಜಿಲ್ಲೆಯ 27 ವಿಧಾನಸಭಾ ಕ್ಷೇತ್ರಗಳಲ್ಲಿ ಗುರುತಿಸಲಾದ ಮತಕೇಂದ್ರಗಳಲ್ಲಿ ನ.21ರ ರವಿವಾರ ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ.

► ಫಲಿತಾಂಶ: ನ.21ರ ಸಂಜೆ ಜಿಲ್ಲಾಧ್ಯಕ್ಷರ ಫಲಿತಾಂಶ ಪ್ರಕಟ

► ನ.24ರಂದು ಕಸಾಪ ಅಧ್ಯಕ್ಷರ ಫಲಿತಾಂಶ ಪ್ರಕಟ

ಗಡಿನಾಡ, ಹೊರನಾಡ ಮತದಾರರು ರಿಜಿಸ್ಟರ್ಡ್ ಅಂಚೆಯ ಮೂಲಕ ಕಳುಹಿಸುವ ಮತಪತ್ರಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಚುನಾವಣಾ ಫಲಿತಾಂಶ ಪ್ರಕಟಸುವ ದಿನಾಂಕಕ್ಕೆ ಒಂದು ದಿನ ಮುಂಚಿತವಾಗಿ ಅಂದರೆ ನ.23ರ ಬೆಳಗ್ಗೆ 11ಗಂಟೆಯೊಳಗೆ ಬೆಂಗಳೂರಿನಲ್ಲಿರುವ ಕಸಾಪ ಕೇಂದ್ರ ಚುನಾವಣಾಧಿಕಾರಿಗಳಿಗೆ ತಲುಪಿಸಬೇಕೆಂದು ಕಸಾಪ ಚುನಾವಣಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News