ಡಿ.ಕೆ.ಶಿವಕುಮಾರ್ ಗೆ ಭ್ರಷ್ಟಾಚಾರದ ಪ್ರಕರಣಗಳು ಹೊಸದೇನಲ್ಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Update: 2021-10-13 15:02 GMT

ಮೈಸೂರು,ಅ.13: ಕಾಂಗ್ರೆಸ್ ಅಂದರೆ ಹಗರಣಗಳ ಸರ್ಕಾರ ಡಿ.ಕೆ.ಶಿವಕುಮಾರ್ ಕುರಿತು ಅವರ ಪಕ್ಷದವರ ಸಂಭಾಷಣೆ ಸತ್ಯವಾಗಿದ್ದು, ಡಿ.ಕೆ.ಶಿವಕುಮಾರ್ ಅವರಿಗೆ ಭ್ರಷ್ಟಾಚಾರದ ಪ್ರಕರಣಗಳು ಹೊಸದೇನಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದರು.

ಬುಧವಾರ  ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಡಿ.ಕೆ.ಶಿವಕುಮಾರ್ ಅವರ ಅಧಿಕಾರವಧಿಯಲ್ಲಿ ಸಾಕಷ್ಟು ಹಗರಣಗಳು ನಡೆದಿವೆ. ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಹಲವಾರು ಹಗರಣಗಳೇ ನಡೆದಿವೆ. ಹಾಗಾಗಿ ಡಿ.ಕೆ.ಶಿವಕುಮಾರ್ ಅವರ ಹಗರಣವನ್ನು ಅವರ ಪಕ್ಷದ ಮುಖಂಡರುಗಳೇ ಬಯಲು ಮಾಡಿದ್ದಾರೆ'' ಎಂದು ಲೇವಡಿ ಮಾಡಿದರು.

ದೇಶದಲ್ಲಿ ರಸಗೊಬ್ಬರದ ಕೊರತೆ ಇಲ್ಲ. ಈ ವರ್ಷ ದೇಶದಲ್ಲಿ ಉತ್ತಮ ಮಳೆ ಆಗಿ ಕೃಷಿ ಆದಾಯ ಹೆಚ್ಚಾಗಿದೆ. ನಮಗೆ ಪೊಟ್ಯಾಷ್ ಹೊರ ದೇಶದಿಂದ ಬರುತ್ತೆ. ಕೊರೊನಾ ಕಾರಣಕ್ಕೆ ವಿದೇಶದಿಂದ ಬರುವ ರಸಗೊಬ್ಬರದಲ್ಲಿ ಕೊಂಚ ಕೊರತೆಯುಂಟಾಗಿದೆ. ಇನ್ನೆರಡು ವರ್ಷದಲ್ಲಿ ಮೋದಿ ಸರ್ಕಾರ ರಸಗೊಬ್ಬರದಲ್ಲೂ ಸ್ವಾವಲಂಭನೆ ಸಾಧಿಸುವ ಕಾರ್ಯಕ್ರಮ ರೂಪಿಸಲಿದೆ ಎಂದು ಹೇಳಿದರು.

ಉತ್ತರ ಪ್ರದೇಶದ ಸಹ ಪ್ರಭಾರಿ ಆಗುವ ಅವಕಾಶ ನನಗೆ ಸಿಕ್ಕಿದೆ. ಉತ್ತರ ಪ್ರದೇಶದಲ್ಲಿ ದೇಶದ ರಾಜಕೀಯ ನಿರ್ಣಯ ಮಾಡುವ ಚುನಾವಣೆ ಬರುಲಿದೆ. ಉತ್ತರ ಪ್ರದೇಶದ ಇಂದಿನ ಸ್ಥಿತಿ ಬಹಳ ಕಷ್ಟವಾಗಿದೆ. ಆಯೋಧ್ಯೆಯಲ್ಲಿ ಶತಮಾನಗಳ ನಮ್ಮ ಶ್ರೀರಾಮನ ಕನಸಲು ಈಡೇರಿದೆ. ಅದಕ್ಕಾಗಿ ಯೋಗಿ ಆಧಿತ್ಯನಾಥ್ ಅವರ ಸರ್ಕಾರವನ್ನು ಮತ್ತೆ ತರಬೇಕಿದೆ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News