×
Ad

ಕೆನರಾ ಬ್ಯಾಂಕ್‍ನಿಂದ ಸಾಲ ಸೌಲಭ್ಯ ಕುರಿತ ಪ್ರಚಾರ

Update: 2021-10-13 21:41 IST

ಬೆಂಗಳೂರು, ಅ.13: ಸಾಲ ಸೌಲಭ್ಯ ನೀಡುವ ಅಭಿಯಾನದಡಿ ಕೆನರಾ ಬ್ಯಾಂಕ್ ಅ.13ರಿಂದ 30ರವರೆಗೆ ರಾಜ್ಯದ ವಿವಿಧ ಜಿಲೆಗಳಲ್ಲಿ ಕಾರ್ಯಕ್ರಮ ಆಯೋಜಿಸಿದೆ. 

ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಸಾರ್ವಜನಿಕ ವಲಯದ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಡಿಸಿಸಿಬಿಗಳು, ಎಂಎಫ್‍ಐಗಳು, ಎನ್‍ಬಿಎಫ್‍ಸಿಗಳು ಮತ್ತು ಖಾಸಗಿ ವಲಯದ ಬ್ಯಾಂಕುಗಳು, ನಬಾರ್ಡ್, ಕೆವಿಐಸಿ, ಕೆವಿಐಬಿ ಮತ್ತು ಡಿಐಸಿಯಂತಹ ಇತರ ಸರಕಾರಿ ಇಲಾಖೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿವೆ. 

ಜನಸಾಮಾನ್ಯರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿವಿಧ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ಪಡದುಕೊಂಡು ಸಾಲ ಸೌಲಭ್ಯಗಳಿಗೆ ಅರ್ಜಿ ಹಾಕಬಹುದು ಮತ್ತು ಪ್ರದಾನ ಮಂತ್ರಿಗಳ ವಿವಿಧ ಜನ ಸುರಕ್ಷಾ ಯೋಜನೇಯಡಿಗಲ್ಲಿ ನೋಂದಾಯಿಸಿಕೊಳ್ಳಲು ಕರ್ನಾಟಕ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿಯು ಮನವಿ ಮಾಡಿದೆ.

ಈ ಅಭಿಯಾನದಲ್ಲಿ ಶಿಕ್ಷಣ, ವಸತಿ ಸಾಲಗಳು. ಜತೆಗೆ ವಿಶೇಷ ಜಾಗೃತಿ ಅಭಿಯಾನವನ್ನು ನಡೆಸಲು ಬ್ಯಾಂಕ್‍ಗಳಿಂದ ಎಲ್ಲ ಪ್ರಯತ್ನ ಮಾಡಲಾಗುವುದು ಎಂದು ಸಮಿತಿಯು ತಿಳಿಸಿದೆ.  ಹೆಚ್ಚಿನ ಮಾಹಿತಿಗಾಗಿ ರಾಘವ್ 7795213926/ಕವಿತಾ ಯು 9986972561 ಅವರನ್ನು ಸಂಪರ್ಕಿಸಲು ಕೋರಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News