ವಿಚಾರವಾದಿ, ಸಾಹಿತಿ, ನಟ ಪ್ರೊ. ಜಿ.ಕೆ. ಗೋವಿಂದರಾವ್ ನಿಧನ

Update: 2021-10-15 04:08 GMT

ಬೆಂಗಳೂರು : ವಿಚಾರವಾದಿ, ಸಾಹಿತಿ, ನಟ ಪ್ರೊ. ಜಿ.ಕೆ. ಗೋವಿಂದರಾವ್ ಅವರು ಹುಬ್ಬಳ್ಳಿಯ ಮಗಳ ಮನೆಯಲ್ಲಿ ಇಂದು ಬೆಳಗ್ಗೆ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. 

ಪ್ರೊ. ಜಿ.ಕೆ. ಗೋವಿಂದ ರಾವ್ 1937 ಏಪ್ರಿಲ್ 27ರಂದು ಬೆಂಗಳೂರಿನಲ್ಲಿ ಜನಿಸಿದ್ದರು. ಇಂಗ್ಲಿಷ್ ಸಾಹಿತ್ಯದ ಅಧ್ಯಯನ ನಡೆಸಿದ ಅವರು ಇಂಗ್ಲಿಷ್‌ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದರು.

ರಂಗಭೂಮಿ, ಸಿನಿಮಾರಂಗದ ಒಡನಾಟ ಇವರಿಗಿದೆ. ಸಮಕಾಲೀನ ಪ್ರಜಾಸತ್ತಾತ್ಮಕ ಆಂದೋಲನಗಳಲ್ಲಿ ಭಾಗವಹಿಸಿ ತಮ್ಮ ಜನಪರ ನಿಲುವನ್ನು ಪ್ರಕಟಿಸುವುದು ಅವರಿಗೆ ಸದಾ ಆದ್ಯತೆಯ ವಿಷಯವಾಗಿತ್ತು. ಸುಮಾರು ಐವತ್ತು ವರ್ಷಕ್ಕೂ ಹೆಚ್ಚು  ಕಾಲ ರಂಗಭೂಮಿಯಲ್ಲಿ ತೊಡಗಿದ್ದವರು. ಭಾವಪೂರ್ಣವಾಗಿ ಅಭಿನಯಿಸುತ್ತಿದ್ದರು. ಹೊಸ ಅಲೆ ಸಿನೆಮಾಗಳಿಂದ ಚಿತ್ರರಂಗಕ್ಕೆ ಬಂದು ಪ್ರಧಾನವಾಹಿನಿಯಲ್ಲೂ ಇದ್ದವರು. ಅದೇ ಕಾಲಕ್ಕೆ ಅಧ್ಯಾಪಕ, ಸಂಘಟನೆಯ ನಾಯಕತ್ವ ವಹಿಸಿದ್ದರು.

ತಮ್ಮ ಕಾಲೇಜಿನಿಂದ ಅನೇಕರನ್ನು ಪ್ರೋತ್ಸಾಹಿಸಿ ಅಭಿನಯ ವೃತ್ತಿಗೆ ಕಳುಹಿಸಿದವರು. ಜನಪರ ಆಂದೋಲನಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು‌. ಕಥೆ ನಾಟಕ ವಿಮರ್ಶೆಗಳನ್ನೂ ಬರೆದಿದ್ದರು.

ಪ್ರಕಟಿತ ಕೃತಿಗಳು

ಈಶ್ವರ ಅಲ್ಲಾ (ಕಿರುಕಾದಂಬರಿ), ಶೇಕ್ಸ್‌ ಪಿಯರ್ ಎರಡು ನಾಟಕಗಳ ಅಧ್ಯಯನ, ಶೇಕ್ಸ್‌ ಪಿಯರ್ ಸಂವಾದ (ವಿಮರ್ಶಾ ಲೇಖನಗಳು), ನಡೆ-ನುಡಿ, ನಾಗರಿಕತೆ ಮತ್ತು ಅರಾಜಕತೆ, ಬಿಂಬ ಪ್ರತಿಬಿಂಬ, ಕ್ರಿಯೆ ಪ್ರತಿಕ್ರಿಯೆ, ಮನು ವರ್ಸಸ್ ಅಂಬೇಡ್ಕರ್: ತಮ್ಮ ಆಯ್ಕೆ ಯಾವುದು? (ಸಂಕೀರ್ಣ ಬರಹಗಳ ಸಂಗ್ರಹಗಳು)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News