ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನ ಇಳಿಕೆ: ಸಿದ್ದರಾಮಯ್ಯ

Update: 2021-10-15 13:01 GMT

ಬೆಂಗಳೂರು, ಅ.15: ವಿಶ್ವದ 116 ದೇಶಗಳ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 101ನೇ ಸ್ಥಾನಕ್ಕೆ ಇಳಿದಿದೆ. ಕಳೆದ ವರ್ಷದ ಸೂಚ್ಯಂಕದಲ್ಲಿ ಭಾರತದ ಸ್ಥಾನ 107 ಆಗಿತ್ತು. ನಮ್ಮ ಸರಕಾರದ ಅನ್ನಭಾಗ್ಯ, ಕ್ಷೀರಭಾಗ್ಯ, ಬಿಸಿ ಊಟ, ಇಂದಿರಾ ಕ್ಯಾಂಟೀನ್ ಯೋಜನೆಗಳ ಟೀಕಾಕಾರರು ದಯವಿಟ್ಟು ಈ ವರದಿಯನ್ನು ಓದಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

''ಅಫ್ಘಾನಿಸ್ತಾನ, ಕಾಂಗೋ, ಸೋಮಾಲಿಯ ದೇಶಗಳು ಸೇರಿದಂತೆ ವಿಶ್ವದ 15 ದೇಶಗಳಲ್ಲಿ ಮಾತ್ರ ಭಾರತಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಹಸಿದ ಹೊಟ್ಟೆಯಲ್ಲಿ ಮಲಗಿರುವವರಿರುತ್ತಾರೆ. ಈ ವರದಿಯ ಪ್ರಕಾರ ನೆರೆಯ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ದೇಶಗಳ ಸ್ಥಿತಿ ಉತ್ತಮವಾಗಿದೆ'' ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News