ಸಾರಿಗೆ ನೌಕರರ ಬಾಕಿ ವೇತನ ಬಿಡುಗಡೆ ಮಾಡಿದ ಸರಕಾರ

Update: 2021-10-15 14:48 GMT

ಬೆಂಗಳೂರು, ಅ.15: ಸಾರಿಗೆ ನೌಕರರಿಗೆ ಕಳೆದ ಆಗಸ್ಟ್ ತಿಂಗಳ ಬಾಕಿ ಸಂಬಳವನ್ನು ಪಾವತಿಸುವಂತೆ ಸರಕಾರವು ಅನುದಾನವನ್ನು ಬಿಡುಗಡೆ ಮಾಡಿದೆ. ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಸರಕಾರವು ಸಾರಿಗೆ ಇಲಾಖೆಯ 4 ನಿಗಮಗಳಿಗೆ 171 ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ಇದರ ಜೊತೆಗೆ ಆಯುಧ ಪೂಜೆಗೆಂದು ಸಂಪ್ರದಾಯದಂತೆ ಪ್ರತಿ ವಾಹನಕ್ಕೆ 100 ರೂ. ಮತ್ತು ಪ್ರತಿ ವಿಭಾಗೀಯ ಕಾರ್ಯಾಗಾರಕ್ಕೆ 1000 ರೂ.ಗಳನ್ನು ಹಣ ಬಿಡುಗಡೆ ಮಾಡಿದೆ.

ಮೊದಲೇ ನಷ್ಟದಲ್ಲಿರುವ ಸಾರಿಗೆ ನಿಗಮಗಳಿಗೆ ಕಳೆದ ಒಂದು ವರ್ಷದಿಂದ ಕೊರೋನ ಲಾಕ್‍ಡೌನ್ ಭಾರೀ ಹೊಡೆತವನ್ನು ನೀಡಿದೆ. ಡೀಸಲ್ ಬೆಲೆ ಏರಿಕೆ ಮತ್ತು ಕನಿಷ್ಠ ಪ್ರಯಾಣಿಕರಿಲ್ಲದೆ ನಿಗಮಗಳಿಗೆ ನಿರೀಕ್ಷಿತ ಆದಾಯ ಬರುತ್ತಿಲ್ಲ. ಅಲ್ಲದೇ ಸಾರಿಗೆ ನಿಗಮಗಳಿಗೆ ಬರುತ್ತಿರುವ ಆದಾಯ ಸಂಸ್ಥೆಯ ಸಿಬ್ಬಂದಿಗಳಿಗೆ ವೇತನ ನೀಡಲು ಸಹ ಸಾಲುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಾರಿಗೆ ನಿಗಮಗಳಿಗೆ ಆರ್ಥಿಕ ನಷ್ಟ ಉಂಟಾಗಿದೆ. ಇಡೀ ವರ್ಷದ ಸಾರಿಗೆ ನೌಕರರ ವೇತನ ನಿರ್ವಹಣೆಯನ್ನು ಸರಕಾರದ ಅನುದಾನದಲ್ಲಿ ನೀಡಲಾಗಿದೆ ಎಂದು ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News