ಅಬ್ದುಲ್ ಸುಭಾನ್ ಸೇಠ್ ಗೆ ಜಾಗತಿಕ ನಾಯಕತ್ವ ಪ್ರಶಸ್ತಿ

Update: 2021-10-16 12:00 GMT

ಬೀದರ್: ಬೆಂಗಳೂರಿನ ಅಪ್ ಮೈ ರ್‍ಯಾಂಕ್ಸ್ ನಿರ್ದೇಶಕ ಬೀದರ್ ಮೂಲದ ಅಬ್ದುಲ್ ಸುಭಾನ್ ಸೇಠ್ ಅವರಿಗೆ ಗ್ಲೋಬಲ್ ಬಿಸಿನೆಸ್ ಫೆಡರೇಷನ್ ವತಿಯಿಂದ ಕೊಡಲಾಗುವ ಜಾಗತಿಕ ಶ್ರೇಷ್ಠತೆ ಮತ್ತು ನಾಯಕತ್ವ ಪ್ರಶಸ್ತಿ ದೊರೆತಿದೆ.

ಶಿಕ್ಷಣ ಕ್ಷೇತ್ರಕ್ಕೆ ನೀಡಿದ ವಿಶಿಷ್ಟ ಕೊಡುಗೆಗಾಗಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಫೆಡರೇಷನ್ ಅ.22ರಂದು ದುಬೈನ ದಿ ಹೋಟೆಲ್ ಒಬೆರಾಯ್ ನಲ್ಲಿ ಹಮ್ಮಿಕೊಂಡಿರುವ ಸಮಾರಂಭದಲ್ಲಿ ಪ್ರಶಸ್ತಿ ಮಾಡಲಿದೆ.

ಸುಭಾನ್ ಸೇಠ್ ಅವರು ಬೀದರ್ ಜಿಲ್ಲಾ ಹಿರಿಯ ಕಾಂಗ್ರೆಸ್ ಮುಖಂಡ ಅಬ್ದುಲ್ ಮನ್ನಾನ್ ಅವರ ಪುತ್ರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News