ಕ್ಷೇತ್ರ ಪುನರ್‌ವಿಂಗಡನೆ ಅರ್ಜಿ ಇತ್ಯರ್ಥ ಬಳಿಕ ಜಿಪಂ, ತಾಪಂ ಚುನಾವಣೆ: ಸಚಿವ ಮಾಧುಸ್ವಾಮಿ

Update: 2021-10-16 17:44 GMT

ತುಮಕೂರು.ಅ.16: ರಾಜ್ಯ ಚುನಾವಣಾ ಆಯೋಗ ನಡೆಸಿದ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಕ್ಷೇತ್ರಗಳ ಪುನರ್ ವಿಂಗಡನೆ ಕುರಿತಂತೆ ಹೈಕೋರ್ಟಿನಲ್ಲಿ ಸುಮಾರು 2661ಕ್ಕೂ ಹೆಚ್ಚು ತಕರಾರು ಅರ್ಜಿಗಳು ಸಲ್ಲಿಕೆಯಾದ ಹಿನ್ನೆಲೆಯಲ್ಲಿ, ಹೈಕೋರ್ಟಿನ ನಿರ್ದೇಶನದಂತೆ ಸರಕಾರ ಉಪಚುನಾವಣೆಯ ನಂತರ ಕ್ಷೇತ್ರ ಪುನರ್ ವಿಂಗಡನಾ ಸಮಿತಿ ರಚಿಸಿ, ಅರ್ಜಿಗಳನ್ನು ಇತ್ಯರ್ಥ ಪಡಿಸಿದ ನಂತರ ಚುನಾವಣೆಗೆ ಮುಂದಾಗುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯತ್ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಪಂ, ತಾಪಂ ಚುನಾವಣೆ ನಡೆಸುವ ಸಂಬಂಧ ಚುನಾವಣಾ ಆಯೋಗ ನಡೆಸಿದ ಕ್ಷೇತ್ರಗಳ ಪುನರ್ ವಿಂಗಡನೆ ಬಗ್ಗೆ ಹೈಕೋರ್ಟಿನಲ್ಲಿ ತರಕಾರು ಅರ್ಜಿಗಳು ಇವೆ. ಅವುಗಳನ್ನು ಇತ್ಯರ್ಥ ಪಡಿಸದೇ ಚುನಾವಣೆ ನಡೆಸುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಬಹು ಸದಸ್ಯರನ್ನು ಒಳಗೊಂಡ ಸಮಿತಿಯನ್ನು ಉಪಚುನಾವಣೆಯ ನಂತರ ನೇಮಕ ಮಾಡಲಿದೆ. ಸಮಿತಿ ತರಕಾರು ಅರ್ಜಿಗಳನ್ನು ಇತ್ಯರ್ಥ ಪಡಿಸಲಿದೆ. ಈ ಪ್ರಕ್ರಿಯೆ ಒಂದೆರಡು ತಿಂಗಳಲ್ಲಿ ನಡೆಯಲಿದೆ. ಆ ನಂತರ ಚುನಾವಣೆಗೆ ನಡೆಸಲು ಅವಕಾಶವಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News