×
Ad

ಒಂದು ರೂಪಾಯಿ ಕೊಡದೆ ಪುಗಸಟ್ಟೆ ಲೆಕ್ಕ ಕೇಳಲು ಕುಮಾರಸ್ವಾಮಿ ಯಾರು: ಈಶ್ವರಪ್ಪ ಪ್ರಶ್ನೆ

Update: 2021-10-17 16:50 IST

ಶಿವಮೊಗ್ಗ, ಅ.17: ರಾಮಮಂದಿರ ನಿರ್ಮಾಣಕ್ಕೆ ಒಂದು ರೂಪಾಯಿ ಕೊಡದೇ ಪುಗಸಟ್ಟೆ‌ ಲೆಕ್ಕ ಕೇಳಲು ಕುಮಾರಸ್ವಾಮಿ ಯಾರು ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್ ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.

ನಗರದ ಶುಭಮಂಗಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಯಾರು ರಾಮಮಂದಿರ ನಿರ್ಮಾಣಕ್ಕೆ ದುಡ್ಡು ಕೊಟ್ಟಿದ್ದಾರೋ ಅವರಿಗೆ ಲೆಕ್ಕ ಕೇಳುವ ಅಧಿಕಾರ ಇದೆ. ಇವರಿಗೇನು ಅಧಿಕಾರ ಇದೆ ಅಂತಾ ಲೆಕ್ಕ ಕೇಳುತ್ತಾರೆ ಎಂದು ಪ್ರಶ್ನಿಸಿದರು.

''ಮಂದಿರ ನಿರ್ಮಾಣಕ್ಕೆ ಒಂದು ಪೈಸೆಯನ್ನೂ ಕೊಡದೇ ಈಗ ಲೆಕ್ಕ ಕೊಡಿ ಎಂದರೆ ಹೇಗೆ? ಹಾಗೇನಾದರೂ ಕೊಟ್ಟಿದ್ದರೆ ಲೆಕ್ಕ ಕೇಳಲಿ, ಆಗ ಸಂತೋಷ ಆಗುತ್ತೆ ಅದನ್ನು ಬಿಟ್ಟು ಒಂದು ರೂಪಾಯಿ ದುಡ್ಡು ಕೊಡದೆ ಪುಕ್ಸಟ್ಟೆ ರಾಮಮಂದಿರದ ಲೆಕ್ಕ ಕೊಡಿ ಎಂದರೆ ಇವರು ಯಾರು ಲೆಕ್ಕ ಕೇಳೋಕೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು.

''ರಾಮಮಂದಿರ ನಿರ್ಮಾಣಕ್ಕೆ ಹಣ ಕೊಟ್ಟವರು ಲೆಕ್ಕ ಕೇಳಬೇಕು.ಕುಮಾರಸ್ವಾಮಿ ಒಂದು ಪೈಸೆ ಕೊಟ್ಟಿಲ್ಲ. ಅವರು ಒಂದು ಪೈಸೆ ಕೊಟ್ಟಿದ್ದರೆ ಲೆಕ್ಕ ಕೇಳಲಿ'' ಎಂದು ತಿರುಗೇಟು ನೀಡಿದರು.

ಉಪಚುನಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ಎರಡೂ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಗೆಲ್ಲುತ್ತೆ ಅನುಮಾನ ಬೇಡ. ಈ ಹಿಂದೆ ನಡೆದ ಎಲ್ಲಾ ಉಪ ಚುನಾವಣೆಯಲ್ಲಿ ಸಹ ನಾವು ಗೆದ್ದಿದ್ದೇವೆ ಈಗಲು ಗೆಲ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News