ವಕ್ಫ್ ಆಸ್ತಿ ವಿವಾದ ಪ್ರಕರಣ; ಟ್ರಿಬ್ಯುನಲ್‍ನಲ್ಲೇ ವಿಚಾರಣೆ ನಡೆಯಲಿ: ಹೈಕೋರ್ಟ್

Update: 2021-10-17 11:36 GMT

ಬೆಂಗಳೂರು, ಅ.17: ರಾಜ್ಯ ವ್ಯಾಪ್ತಿಯ ವಕ್ಫ್ ಆಸ್ತಿಯಲ್ಲಿನ ಬಾಡಿಗೆದಾರರ ತೆರವಿಗೆ ಸಂಬಂಧಿಸಿದ ವ್ಯಾಜ್ಯವನ್ನು ವಕ್ಫ್ ನ್ಯಾಯಾಧಿಕರಣ ಮಾತ್ರವೇ ವಿಚಾರಣೆ ನಡೆಸಬೇಕೆಂದು ಹೈಕೋರ್ಟ್ ಸೂಚನೆ ನೀಡಿದೆ.

ವಕ್ಫ್ ಆಸ್ತಿ ಅಡಿಯಲ್ಲಿರುವ ಮೈಸೂರಿನ ಸಯ್ಯಾಜಿ ರಸ್ತೆಯ ರಿಫಾ ಸಂಕೀರ್ಣದಲ್ಲಿರುವ ಮಳಿಗೆಗಳ ತೆರವು ಕೋರಿ ಕರ್ನಾಟಕ ವಕ್ಫ್ ಮಂಡಳಿಯ ಮುಖ್ಯ ಕಾರ್ಯಕಾರಿ ಅಧಿಕಾರಿ ನೀಡಿದ್ದ ನೋಟಿಸ್ ಪ್ರಶ್ನಿಸಿ ಸಂಕೀರ್ಣದ ಮಳಿಗೆಗಳ ಬಾಡಿಗೆದಾರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು.

ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಪೀಠ, ವಕ್ಫ್ ಆಸ್ತಿಯಲ್ಲಿನ ಬಾಡಿಗೆದಾರರ ತೆರವು ಮತ್ತು ಅನಧಿಕೃತ ಒತ್ತುವರಿದಾರರನ್ನು ತೆರವುಗೊಳಿಸಲು ರಾಜ್ಯ ಶಾಸನಸಭೆ ವಕ್ಫ್ ಕಾಯ್ದೆ ರೂಪಿಸಿ ಜಾರಿಗೆ ತಂದಿದೆ. ಅದರಂತೆ ವಕ್ಫ್ ಆಸ್ತಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ವಕ್ಫ್ ನ್ಯಾಯಾಧಿಕರಣವೇ ವಿಚಾರಣೆ ನಡೆಸಬೇಕೆಂದು ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News