×
Ad

ಆರೆಸ್ಸೆಸ್ ಮುಖಂಡರ ಕೆಲ ವಿಚಾರಗಳು ಸರಿ ಇರುತ್ತವೆ: ಸಭಾಪತಿ ಬಸವರಾಜ ಹೊರಟ್ಟಿ

Update: 2021-10-17 19:02 IST
 ಸಭಾಪತಿ ಬಸವರಾಜ ಹೊರಟ್ಟಿ

ಕೊಪ್ಪಳ, ಅ. 17: `ರಾಷ್ಟ್ರೀಯ ಸ್ವಯಂ ಸೇವಕರ ಸಂಘ(ಆರೆಸ್ಸೆಸ್) ಮುಖಂಡರು ಹೇಳುವ ಕೆಲ ವಿಚಾರಗಳು ಸರಿ ಇರುತ್ತವೆ' ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, `ಆರೆಸ್ಸೆಸ್ ವಿಚಾರವಾಗಿ ನಾನು ರಾಜಕಾರಣವನ್ನು ಮಾತನಾಡುವುದಿಲ್ಲ. ಆರೆಸ್ಸೆಸ್ ಮುಖಂಡರ ಕೆಲ ವಿಚಾರಗಳು ಸರಿ ಇರುತ್ತವೆ. ಆದರೆ, ನಾನು ವೈಯಕ್ತಿಕವಾಗಿ ಏನೂ ಪ್ರತಿಕ್ರಿಯೆ ನೀಡಿರುವುದಿಲ್ಲ' ಎಂದು ಸ್ಪಷ್ಟಪಡಿಸಿದರು.

`ಈ ಹಿಂದೆ ರಾಜಕಾರಣ ಎಂದರೆ ಅದು ತತ್ವದ ಆಧಾರದ ಮೇಲೆ ಇತ್ತು. ಇಂದಿನ ರಾಜಕಾರಣ ಬರೀ ಟೀಕೆಗೆ ಸೀಮಿತವಾಗಿದೆ. ಇದು ಜನರಿಗೆ ಬೇಸರ ತರಿಸಿದೆ. ಬರೀ ಟೀಕೆಯಿಂದ ಪ್ರಯೋಜನ ಆಗುವುದಿಲ್ಲ. ನಾವು ಏನು ಕೆಲಸ ಮಾಡುತ್ತೇವೆ ಎಂಬುದು ಮುಖ್ಯ' ಎಂದು ಹೊರಟ್ಟಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News