×
Ad

ಡೆಂಘಿ ಜ್ವರದಿಂದ ಎಸೆಸೆಲ್ಸಿ ವಿದ್ಯಾರ್ಥಿನಿ ಮೃತ್ಯು

Update: 2021-10-17 19:21 IST
file photo

ಗದಗ, ಅ.17: ಡೆಂಘಿ ಜ್ವರದಿಂದ ಎಸೆಸೆಲ್ಸಿ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಇಲ್ಲಿನ ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿ ವರದಿಯಾಗಿದೆ.

ಹರದಗಟ್ಟಿ ಗ್ರಾಮದ ಶಿವಪ್ಪ ಮತ್ತು ತುಳಜಾಬಾಯಿ ದಂಪತಿಯ ಪುತ್ರಿ ವೈಶಾಲಿ ಶಿವಪ್ಪ ಎಂಬಾಕೆ ಮೃತ ವಿದ್ಯಾರ್ಥಿನಿ ಎಂದು ತಿಳಿದುಬಂದಿದೆ.

ಇತ್ತೀಚಿಗಷ್ಟೇ ದಸರಾ ರಜೆಗೆ ಊರಿಗೆ ಬಂದಿದ್ದ ವೈಶಾಲಿ, ಸಣ್ಣ ಪ್ರಮಾಣದಲ್ಲಿ ಜ್ವರ, ನಿಃಶಕ್ತಿ ಕಾಣಿಸಿಕೊಂಡಿತ್ತು. ಬಳಿಕ ಡೆಂಘಿ ಜ್ವರದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನೆ ಸಂಬಂಧ ಆರೋಗ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News