×
Ad

8 ಸಾಧಕರಿಗೆ ಡಾಕ್ ಸೇವಾ ಪ್ರಶಸ್ತಿ ಪ್ರಧಾನ ಮಾಡಿದ ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

Update: 2021-10-17 20:07 IST

ಬೆಂಗಳೂರು ಅ.17: ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ರಾಜಭವನದಲ್ಲಿ ಎಂಟು ಸಾಧಕರಿಗೆ ಡಾಕ್ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

2020-21ನೇ ಸಾಲಿನ ರಾಜ್ಯಮಟ್ಟದ ಡಾಕ್ ಸೇವಾ ಪ್ರಶಸ್ತಿಯನ್ನು ಅಂಚೆ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 8 ಸಾಧಕರಿಗೆ ಘನತೆವೆತ್ತ ರಾಜ್ಯಪಾಲರು ಪ್ರಧಾನ ಮಾಡಿದರು.

ಬ್ಯ್ರಾಂಚ್ ಪೋಸ್ಟ್ ಮಾಸ್ಟರ್ ಶಂಕರ್ ವೈ ಹರಿಜನ್, ಪೋಸ್ಟ್ ಮಾನ್ ಹೆಚ್.ಅಶ್ವತ್. ಪೋಸ್ಟಲ್ ಅಸಿಸ್ಟೆಂಟ್ ಸೋಮಶೇಖರ ಎನ್, ಅಂಚೆಕಚೇರಿಯ ಅಸಿಸ್ಟೆಂಟ್ ಸೂಪರಿಂಟೆಡೆಂಟ್ ಮೋಹನ್ ಜೆ, ಅಸಿಸ್ಟೆಂಟ್ ಪೋಸ್ಟ್ ಮಾಸ್ಟರ್ ಜನರಲ್ ವಿ ತಾರಾ, ಪೋಸ್ಟಲ್ ಅಸಿಸ್ಟೆಂಟ್ ಶ್ರೀವತ್ಸ ಜೆ, ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ನಾಗಮ್ಮ ಎಸ್ ಮಂತ, ಧನಂಜಯ.ಟಿ ಅವರುಗಳಿಗೆ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಲ್ ನ ಮುಖ್ಯ ಪ್ರಧಾನ ಪೋಸ್ಟ್ ಮಾಸ್ಟರ್ ಶಾರದ ಸಂಪತ್, ಕರ್ನಾಟಕ ದಕ್ಷಿಣ ವಲಯದ ಡಿ.ಎಸ್.ವಿ ಆರ್ ಮೂರ್ತಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News