ಸಾಗರ ಮತ್ತು ಭಾನುಮತಿ ಆನೆಗಳಿಗೆ ಪಾಲಿಕೆಯಿಂದ ಅಗೌರವ; ಆರೋಪ

Update: 2021-10-18 08:53 GMT

ಶಿವಮೊಗ್ಗ :ದಸರಾ ಮೆರವಣಿಗೆಗೆ ಆಗಮಿಸಿದ್ದ ಸಕ್ರೆಬೈಲು ಆನೆ ಬಿಡಾರದ ಆನೆಗಳಿಗೆ ಶಿವಮೊಗ್ಗ ಮಹಾನಗರ ಪಾಲಿಕೆ ಅಗೌರವ ತೋರಿದೆ ಎಂಬ ಆರೋಪ ಕೇಳಿಬಂದಿದ್ದು, ಪಾಲಿಕೆ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಈ ಬಾರಿಯ ದಸರಾ ಆಚರಣೆಯ ವಿಚಾರದಲ್ಲಿ ಮಹಾನಗರ ಪಾಲಿಕೆ ಎಡವಟ್ಟಿನ ಮೇಲೆ ಎಡವಟ್ಟು ಮಾಡಿಕೊಂಡಿದೆ.ಈಗ ಆನೆ ವಿಚಾರವಾಗಿ ಮತ್ತೊಂದು ಎಡವಟ್ಟು ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ.

ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಕ್ರೆಬೈಲು ಬಿಡಾರದ ಸಾಗರ ಮತ್ತು ಭಾನುಮತಿ ಆನೆಗಳಿಗೆ ಅಗೌರವ ತೋರಲಾಗಿದೆ.ದಸರಾ ಮೆರವಣಿಗೆಯಲ್ಲಿ ಇವೆರಡೂ ಆನೆಗಳು ಸ್ವಲ್ಪ ದೂರ ಹೆಜ್ಜೆ ಹಾಕಿ ಬಳಿಕ ಹಿಂತಿರುಗಿದ್ದವು.

ಆದೇ ದಿನ ಮಧ್ಯಾಹ್ನ ವೇಳೆ ಆನೆಗಳು ಬಿಡಾರಕ್ಕೆ ಮರಳಿವೆ. ಶಿವಮೊಗ್ಗದಿಂದ ಸಕ್ರೆಬೈಲು ಆನೆ ಬಿಡಾರದವರೆಗೂ ಆನೆಗಳು ನಡೆದುಕೊಂಡು ಹೋಗಿವೆ. ಆನೆಗಳು ನಡೆದುಕೊಂಡು ಹೋಗಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪ್ರತಿ ಬಾರಿ ಶಿವಮೊಗ್ಗ ದಸರಾ ಅಂಬಾರಿ ಹೊರಲು ಸಕ್ರೆಬೈಲು ಆನೆ ಬಿಡಾರದಿಂದ ಆನೆಗಳನ್ನು ಕರೆ ತರುವಾಗ ಹೇಗೆ ವಾಹನದಲ್ಲಿ ಕರೆ ತರಲಾಗುತ್ತದೆ, ಅದೇ ಮಾದರಿಯಲ್ಲಿ ವಾಪಸ್ ಹೋಗುವಾಗ ವಾಹನದಲ್ಲೇ ಕರೆದುಕೊಂಡು ಹೋಗಬೇಕಿತ್ತು.ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಆನೆಗಳು ರಸ್ತೆ ಮಾರ್ಗದಲ್ಲೇ ಸುಮಾರು 08 ಕಿ.ಮೀ ದೂರ ನಡೆದುಕೊಂಡು ಹೋಗಿವೆ. ಇದಕ್ಕೆ ಪರಿಸರವಾದಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನೂ ಜಂಬೂಸವಾರಿ ಮರುದಿನ ಮಾವುತರಿಗೆ,ಕಾವಾಡಿಗರಿಗೆ ಹಾಗೂ ಆನೆ ಬಿಡಾರದ ಅರಣ್ಯ ಅಧಿಕಾರಿಗಳಿಗೆ ಗೌರವ ಸಲ್ಲಿಸಿ,ಆನೆಗಳಿಗೆ ಪೂಜೆ ಸಲ್ಲಿಸಿ ಬೀಳ್ಕೊಡಲಾಗುತ್ತಿತ್ತು.ಆದರೆ ಈ ಭಾರಿ ಅಂತಹ ಪರಿಪಾಠವಿಲ್ಲದಂತಾಗಿದದೆ ಎಂದು ಶಾರ್ವಜನಿಕರು ಪಾಲಿಕೆ ಆಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News