×
Ad

ಸ್ವಂತ ಅಣ್ಣನ ಬೆಳವಣಿಗೆ ಸಹಿಸದವರು ಬೇರೆಯವರನ್ನು ಬೆಳೆಸ್ತಾರಾ?: ಎಚ್ ಡಿಕೆಗೆ ಝಮೀರ್ ಅಹ್ಮದ್ ತಿರುಗೇಟು

Update: 2021-10-18 17:59 IST

ಬೆಂಗಳೂರು, ಅ.18: 2006ರಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಜೊತೆಗಿನ ಮೈತ್ರಿ ಒಪ್ಪಂದದ ಪ್ರಕಾರ 20 ತಿಂಗಳು ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡಬೇಕಿತ್ತು. ಎಚ್.ಡಿ.ರೇವಣ್ಣ ಉಪಮುಖ್ಯಮಂತ್ರಿ ಆಗುತ್ತಾರೆಂಬ ಭಯದಿಂದ ಎಚ್.ಡಿ.ಕುಮಾರಸ್ವಾಮಿ ಬಿಜೆಪಿಗೆ ನೀಡಿದ್ದ ಬೆಂಬಲ ವಾಪಾಸ್ ಪಡೆದರು. ಸ್ವಂತ ಅಣ್ಣನ ಬೆಳವಣಿಗೆಯನ್ನೆ ಸಹಿಸದವರು ಬೇರೆಯವರನ್ನು ಬೆಳೆಸ್ತಾರಾ? ಎಂದು ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಪ್ರಶ್ನಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನಮ್ಮದು ಹೈಕಮಾಂಡ್ ಪಕ್ಷ ಅಲ್ಲ, ನಮ್ಮ ಎಲ್ಲ ನಿರ್ಧಾರಗಳು ಬೆಂಗಳೂರಲ್ಲೆ ಆಗುತ್ತೆ ಎನ್ನುವ ಎಚ್.ಡಿ.ಕುಮಾರಸ್ವಾಮಿ ಅವರು, ಮುಸ್ಲಿಮ್ ಸಮುದಾಯದವರು ಜೆಡಿಎಸ್‍ನ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಇಂದೇ ಘೋಷಿಸಿಲಿ. ನಾವಾದರೆ ದಿಲ್ಲಿಗೆ ಹೋಗಬೇಕು, ಚರ್ಚೆ ಆಗಬೇಕು. ಕುಮಾರಸ್ವಾಮಿ ಅವರಾದರೆ ಇಲ್ಲೆ ಪಕ್ಕದ ಪದ್ಮನಾಭ ನಗರದಲ್ಲೆ ಘೋಷಣೆ ಮಾಡಿಬಿಡಬಹುದು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News