'ಗದಗ ಜುಮ್ಮಾ ಮಸೀದಿ ಧ್ವಂಸ'; ಪ್ರಮೋದ್ ಮುತಾಲಿಕ್ ಹೇಳಿಕೆಗೆ ವ್ಯಾಪಕ ಆಕ್ರೋಶ

Update: 2021-10-18 13:03 GMT

ಬೆಂಗಳೂರು, ಅ.18: ಗದಗ ಜಿಲ್ಲೆಯ ಜುಮ್ಮಾ ಮಸೀದಿಯು ಮೂಲತಃ ವೆಂಕಟೇಶ್ವರ ದೇವಸ್ಥಾನವಾಗಿದೆ. ಟಿಪ್ಪು ಸುಲ್ತಾನ್ ಅವಧಿಯಲ್ಲಿ ಒಡೆದು ಹಾಕಿದಂತಹ ದೇವಸ್ಥಾನಗಳ ಪೈಕಿ ಇದು ಒಂದು. ಬಾಬರಿ ಮಸೀದಿ ಮಾದರಿಯಲ್ಲಿ ಇದನ್ನು ಹಿಂಪಡೆಯುತ್ತೇವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೀಡಿರುವ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ವಿಡಿಯೋ ವೈರಲ್: 72 ವರ್ಷ ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟ ಮಾಡಬೇಕಾಗಿ ಬಂತು. 72 ವರ್ಷಗಳ ನಂತರ ಬಾಬರಿ ಮಸೀದಿಯನ್ನು ತೆಗೆದು ಹಾಕಿ ಭವ್ಯವಾದ ದೇವಸ್ಥಾನ ನಿರ್ಮಿಸುವಂತಹ ಸಂಕಲ್ಪ ಪೂರ್ಣವಾಗಿದೆ. ಅದೇ ಮಾದರಿಯಲ್ಲಿ ಗದಗ ನಲ್ಲಿರುವ ಜುಮ್ಮಾ ಮಸೀದಿ ವೆಂಕಟೇಶ್ವರ ದೇವಸ್ಥಾನ ಎಂದು ನಾವು ಸವಾಲು ಹಾಕಿ ಹೇಳುತ್ತಿದ್ದೇವೆ.

ಟಿಪ್ಪು ಸುಲ್ತಾನ್ ಅವಧಿಯಲ್ಲಿ ಒಡೆದು ಹಾಕಿದ ದೇವಸ್ಥಾನಗಳ ಪೈಕಿ ಈ ಜುಮ್ಮಾ ಮಸೀದಿ ವೆಂಕಟೇಶ್ವರ ದೇವಸ್ಥಾನವು ಒಂದು ಎಂದು ದಾಖಲೆ ಸಮೇತ ಹೋರಾಟ ಮಾಡಲಿದ್ದೇವೆ ಎಂದು ಪ್ರಮೋದ್ ಮುತಾಲಿಕ್ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News